ಪಾಂಡವಪುರದ ಕಸಾಪ ಭವನದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ದಾನಿಗಳು ನೀಡಿದ ರಕ್ತವನ್ನು ಮಿಮ್ಸ್ ಆಸ್ಪತ್ರೆ ವೈದ್ಯಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಡಾ.ಸುಹಾಸಿನಿ, ಶೈಲೇಂದ್ರಗೌಡ, ನಟರಾಜು, ಅಶೋಕ್ ಇತರರು ಇದ್ದರು. 
ಜಿಲ್ಲೆ

ಬೃಹತ್ ರಕ್ತದಾನ ಶಿಬಿರ

ಪಾಂಡವಪುರ: ತಾಲೂಕಿನ ಮೇಲುಕೋಟೆಯ ಎಸ್‌ಇಟಿಪಿ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಸಂಘ, ಕಸಾಪ, ಜೀವಧಾರೆ ಟ್ರಸ್ಟ್ ಹಾಗೂ ಮಂಡ್ಯ ವೈದ್ಯಕೀಯ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಭಾನುವಾರ ಬೃಹತ್ ರಕ್ತದಾನ ಶಿಬಿರ ನಡೆಯಿತು.

ಇತ್ತೀಚೆಗೆ ನಿಧನರಾದ ಎಸ್‌ಇಟಿಪಿ ಶಾಲೆಯ ಪ್ರಾಂಶುಪಾಲ ಅರವಿಂದ ಅವರ ಸ್ಮರಣಾರ್ಥ ಪಟ್ಟಣದ ಕಸಾಪ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಶಿಬಿರದಲ್ಲಿ ಎಸ್‌ಇಟಿಪಿ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಸೇರಿದಂತೆ ದಾನಿಗಳು ಭಾಗವಹಿಸಿ ರಕ್ತದಾನ ಮಾಡಿದರು. ಶಿಬಿರದಲ್ಲಿ ಸುಮಾರು 30ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹವಾಯಿತು.

ಬಳಿಕ ಮಿಮ್ಸ್ ವೈದ್ಯಾಧಿಕಾರಿ ಡಾ.ಸುಹಾಸಿನಿ ಮಾತನಾಡಿ, ಯುವಕರು, ಆರೋಗ್ಯವಂತರು ಹೆಚ್ಚು ರಕ್ತದಾನ ಮಾಡುವ ಮೂಲಕ ಜೀವಗಳ ಉಳಿಸಲು ಸಹಕಾರ ನೀಡಬೇಕು. ಸೂಕ್ತ ಸಂದರ್ಭದಲ್ಲಿ ರಕ್ತ ದೊರೆತರೆ ಜೀವಗಳನ್ನು ಉಳಿಸಲು ಸಹಕಾರಿಯಾಗುತ್ತದೆ. ಅಪಘಾತಕ್ಕೊಳಗಾದವರು, ಗರ್ಭಿಣಿಯರು ಹೀಗೆ ತುರ್ತು ಪರಿಸ್ಥಿತಿಯಲ್ಲಿ ನೀಡುವ ರಕ್ತ ಮಹತ್ವವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜೀವಧಾರೆ ಸಂಸ್ಥೆಯ ನಟರಾಜು, ವಿದ್ಯಾರ್ಥಿ ಸಂಘದ ಅಧ್ಯಕ್ಷ ಶೈಲೇಂದ್ರಗೌಡ, ಮಯೂರಗೌಡ, ಪಾಂಡಿದೊರೆ ಮಾಣಿಕ್ಯನಹಳ್ಳಿ ಅಶೋಕ್, ವಿಜಯಭಾಸ್ಕರ್ ಇತರರು ಇದ್ದರು.