ಜಿಲ್ಲೆ

ಶ್ರೀಯೋಗ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಸಾಮೂಹಿಕ ಯಜುರ್ ಉಪಾಕರ್ಮ

ಮೈಸೂರು: ವಿಜಯನಗರದಲ್ಲಿರುವ ಶ್ರೀಯೋಗ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಸಾಮೂಹಿಕ ಯಜುರ್ ಉಪಾಕರ್ಮ ಆಚರಿಸಲಾಯಿತು.
ದೇವಸ್ಥಾನ ಸಂಸ್ಥಾಪಕ ಶ್ರೀಭಾಷ್ಯಂ ಸ್ವಾಮೀಜಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನತೆಯಲ್ಲಿ ಸಂಸ್ಕಾರ ಹಾಗೂ ಜೀವನ ಮೌಲ್ಯಗಳ ಕೊರತೆಯಿಂದಾಗಿ ಹಿರಿಯರ ಬಗ್ಗೆ ಗೌರವವಿಲ್ಲದ ಪರಿಣಾಮ ಅವರನ್ನು ವೃದ್ಧಾಶಮಕ್ಕೆ ಸೇರಿಸುತ್ತಿರುವುದು ವಿಷಾದನೀಯ.
ಹಿಂದು ಧರ್ಮ ಶ್ರೇಷ್ಠವಾದದ್ದು. ಮಕ್ಕಳಲ್ಲಿ ಧಾರ್ಮಿಕತೆಯ ವಾಸ್ತವದ ವಿಚಾರಗಳ ಅರಿವಿನ ಕೊರತೆಯಿಂದ ಧರ್ಮಕ್ಕೆ ಹಿನ್ನಡೆಯಾಗುತ್ತಿದೆ. ದೇವಸ್ಥಾನಗಳು ಕೇವಲ ಪೂಜೆ ಹಾಗೂ ಧಾರ್ಮಿಕ ಆಚರಣೆಗಳಿಗೆ ಸಿಮೀತವಾಗದೆ ಸಾಮಾಜಿಕ ಕ್ಷೇತ್ರಗಳ ಅಭಿವೃದ್ಧಿಯ ಚಟುವಟಿಕೆಗಳೊಂದಿಗೆ ಸಮಾಜದ ಕುಂದುಕೊರತೆಗಳಿಗೆ ಸ್ಪಂದಿಸುವ ಕೇಂದ್ರಗಳಾಗಬೇಕು ಎಂದು ಅಭಿಪ್ರಾಯಪಟ್ಟರು.
ದೇವಸ್ಥಾನದ ವ್ಯವಸ್ಥಾಪಕ ಎನ್.ಶ್ರೀನಿವಾಸನ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಮುಖಂಡರಾದ ಆಡಳಿತ ಮಂಡಳಿಯ ಶೇಷಾದ್ರಿ, ಗಿರೀಶ್, ಚಕ್ರಪಾಣಿ ಇತರರು ಇದ್ದರು. ಯಜ್ಞೋಪವೀತಂ ಜನಿವಾರ ಬದಲಾಯಿಸಿಕೊಂಡು ಸಂಧ್ಯಾವಂದನೆ, ಗಾಯತ್ರಿ ಜಪ, ಹೋಮ ನೆರವೇರಿಸಲಾಯಿತು.