ಜಿಲ್ಲೆ

ಸಾಮೂಹಿಕ ಸತ್ಯನಾರಾಯಣ ಪೂಜೆ

ವೀರೇಶ ಸೌದ್ರಿ

ರಟ್ಟಿಹಳ್ಳಿ: ಗುರುಪೂರ್ಣಿಮೆ ನಿಮಿತ್ತ ಪಟ್ಟಣದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಬೆಳಗ್ಗೆ ಪಂಚಾಮೃತ ಅಭಿಷೇಕ, ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಪ್ರಸಾದ ವಿತರಣೆ ಕಾರ್ಯಕ್ರಮಗಳು ನೆರವೇರಿದವು.

ಅರ್ಚಕರಾದ ವಾದಿರಾಜ ಕಟ್ಟಿ ಮತ್ತು ನರಸಿಂಹಮೂರ್ತಿ ಅದ್ವಾನಿ ನೇತೃತ್ವದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದವು.

ಸುಶೀಲ ನಾಡಗೇರ, ಗಿರೀಶ ನಾಡಗೇರ, ರಾಘವೇಂದ್ರ ಸವಣೂರ, ಜಯತೀರ್ಥ ಅಧ್ಯಾಪಕ, ನಾರಾಯಣರಾವ್ ಮನೋಪಂತರ, ಸಂತೋಷ ಪವಾರ, ಜಗದೀಶ ಸಾಮ್ನೇಕಾರ, ಶಿವು ಕಟ್ಟೀಮನಿ, ಪ್ರಕಾಶ ಕುಲ್ಕರ್ಣಿ, ಭೀಮಣ್ಣ ಗುಂಡಭಟ್ಟರ್ ಭಕ್ತರು ಉಪಸ್ಥಿತರಿದ್ದರು.

ಸಾಯಿಬಾಬಾ ಸನ್ನಿಧಾನ

ಪಟ್ಟಣದ ಶ್ರೀ ಪ್ರಸಾದಿಮಠದಲ್ಲಿರುವ ಶ್ರೀಸಾಯಿ ಸನ್ನಿಧಾನದಲ್ಲಿ ಕ್ಷೀರಾಭಿಷೇಕ, ಸತ್ಯನಾರಾಯಣ ಪೂಜಾ ಉದ್ಯಾಪನ, ನೈವೇದ್ಯ, ಆರತಿ ಕಾರ್ಯಕ್ರಮಗಳು ಜರುಗಿದವು.

ಧರ್ಮದರ್ಶಿ ರುದ್ರೇಶಸ್ವಾಮಿ ಪ್ರಸಾದಿಮಠ ನೇತೃತ್ವ ವಹಿಸಿದ್ದರು. ವ್ಯವಸ್ಥಾಪಕ ರವೀಂದ್ರ ಮುದ್ದಣ್ಣನವರ, ಎನ್.ಎಸ್. ಕೋರನಾಯಕ, ಮಾರುತಿ ವಾಲ್ಮೀಕಿ, ಯೋಗೀಶ ಹೊಸಕಟ್ಟಿ, ಆಕಾಶ ಹೊಸಕಟ್ಟಿ, ಸಿದ್ದಪ್ಪ ಮಡಿವಾಳರ, ವಿಜಯಲಕ್ಷಿ್ಮೕ ಕವಲಿ, ಕುಮಾರಸ್ವಾಮಿ ಉಜ್ಜಯನಿಮಠ, ಸವಿತಾ ಮುದ್ದಣ್ಣನವರ, ಸಾವಿತ್ರ ಹೊಸಕಟ್ಟಿ, ಸುಮಂಗಲಾ ಪ್ರಸಾದಿಮಠ ಇತರರು ಉಪಸ್ಥಿತರಿದ್ದರು.