ಸಾಗರ: ತಾಲೂಕು ವೀರಶೈವ ಯುವ ವೇದಿಕೆಯಿಂದ ಶ್ರಾವಣ ಮಾಸದ 16ನೇ ವರ್ಷದ ಸಾಮೂಹಿಕ ರುದ್ರಾಭಿಷೇಕ ಮತ್ತು ಧರ್ಮಸಭೆ ಕಾರ್ಯಕ್ರಮವನ್ನು ಸೆ. 4ರಂದು ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 8.30ಕ್ಕೆ ಮಳಲಿಮಠದ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಇಷ್ಟಲಿಂಗ ಪೂಜೆ ಕಾರ್ಯಕ್ರಮ ನಡೆಯಲಿದೆ. 11ಕ್ಕೆ ನಡೆಯುವ ಧರ್ಮಸಭೆ ಸಾನ್ನಿಧ್ಯವನ್ನು ಕೆಳದಿ ರಾಜಗುರು ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. ವೇದಿಕೆ ಅಧ್ಯಕ್ಷ ವಿರೂಪಾಕ್ಷ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಡಾ. ಬಿ.ವಿ.ವೀರಭದ್ರಪ್ಪ, ಶಿವಕುಮಾರ್ ವಿ. ಪಾಟೀಲ್, ಶೇಖರಪ್ಪ ಬೇಸೂರು, ಬಸವರಾಜ್ ಗುಂಡಾಲಿ, ಜಿ.ಎಸ್.ಹಿರೇಮಠ, ಎಸ್.ಸಿ.ಗಂಗಾಧರ ಗೌಡ, ಕಾವ್ಯಾ ಪ್ರಸಾದ್, ಎಚ್.ಎನ್.ಚಂದ್ರಶೇಖರ್ ಪಾಲ್ಗೊಳ್ಳುವರು ಎಂದು ಕಾರ್ಯದರ್ಶಿ ಅನಿಲ್ ಬರದವಳ್ಳಿ ತಿಳಿಸಿದ್ದಾರೆ.