ಗಂಗಾವತಿ ತಾಲೂಕಿನ ಶ್ರೀರಾಮನಗರದ ಬಂಜಾರ ಕಾಲನಿಯ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಶರನ್ನವರಾತ್ರೋತ್ಸವ ನಿಮಿತ್ತ ಮೂರ್ತಿಯನ್ನು ಗೆಜ್ಜೆವಸದಿಂದ ಅಲಂಕರಿಸಲಾಗಿತ್ತು. 
ಜಿಲ್ಲೆ

ಸಾಮೂಹಿಕ ಪಾರಾಯಣ

ರುದ್ರಪ್ಪ ವಾಲಿ

ಗಂಗಾವತಿ: ತಾಲೂಕಿನ ಶ್ರೀರಾಮನಗರದ ಬಂಜಾರ ಕಾಲನಿಯ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಶರನ್ನವರಾತ್ರೋತ್ಸವ ನಿಮಿತ್ತ ಶನಿವಾರ ವಿಶೇಷ ಪೂಜೆ ಸಲ್ಲಿಸಲಾಯಿತು.

ಮೂರ್ತಿಗೆ ಅಭಿಷೇಕ, ಗೆಜ್ಜೆವಸದ ಅಲಂಕಾರ, ಸಾಮೂಹಿಕ ಪಾರಾಯಣ, ನಂದಾದೀಪೋತ್ಸವ, ಶ್ರೀವೆಂಕಟೇಶ ಮಹಾತ್ಮೆ ಪುರಾಣ ಪ್ರವಚನ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ದೇವಾಲಯದ ಆಡಳಿತ ಮಂಡಳಿ ಸದಸ್ಯರು ಮತ್ತು ವಿವಿಧ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.

ಆನೆಗೊಂದಿ: ತಾಲೂಕಿನ ಆನೆಗೊಂದಿಯ ವಾಲಿಕಿಲ್ಲಾ ಮ್ಯಾಗೋಟದ ಶ್ರೀ ಆದಿಶಕ್ತಿ ದೇವಾಲಯದಲ್ಲಿ ಶರನ್ನವರಾತ್ರೋತ್ಸವ ನಿಮಿತ್ತ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.

ಮೂರ್ತಿಗೆ ಅಭಿಷೇಕ, ಕುಂಕುಮಾರ್ಚನೆ, ಸಹಸ್ರನಾಮಾರ್ಚನೆ, ಶ್ರೀ ದುರ್ಗಸಪ್ತಶತಿ ಪಾರಾಯಣ ಮತ್ತು ಮಹಾಪ್ರಸಾದ ವಿತರಣೆ ಜರುಗಿತು. ದೇವಾಲಯದ ಮುಖ್ಯಸ್ಥ ಬ್ರಹ್ಮಾನಂದಯ್ಯಸ್ವಾಮೀಜಿ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.

ವ್ಯವಸ್ಥಾಪಕ ರಾಜಣ್ಣಸ್ವಾಮಿ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಮಾಜಿ ಶಾಸಕ ಪರಣ್ಣಮುನವಳ್ಳಿ, ಮುಖಂಡರಾದ ಕಾಶೀನಾಥ ಚಿತ್ರಗಾರ,ಸಂಗಯ್ಯಸ್ವಾಮಿ ಸಂಶಿಮಠ ಇತರರಿದ್ದರು.