ಬೇಲೂರು: ಬಕ್ರೀದ್ ಅಂಗವಾಗಿ ಪಟ್ಟಣದ ಎಸ್.ಸೂರಾಪುರ ಸಮೀಪದ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಭಾನುವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಕೋಟೆ ಜಾಮಿಯ ಮಸೀದಿ ಧರ್ಮಗುರು ಇರ್ಫಾನ್ ರಜಾ ಮಾತನಾಡಿ, ಜಾತಿ ಧರ್ಮ ಬೇಧವೆನ್ನದೆ ಪರಸ್ಪರ ಪ್ರೀತಿ ವಿಶ್ವಾಸದಿಂದ ಎಲ್ಲರೂ ಬಾಳಬೇಕು. ಜಾತಿ, ಧರ್ಮಗಳ ಹೊರತಾಗಿ ಪ್ರೀತಿ, ಮಮತೆ, ಶಾಂತಿ ಸಹೋದರತೆಯನ್ನು ನಾಡಿನಲ್ಲಿ ಉಳಿಸಿ, ಬೆಳೆಸೋಣ ಎಂದರು
ಹಿರಿಯರು, ಮಕ್ಕಳು ಸೇರಿದಂತೆ ಮುಸ್ಲಿಮರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಪೊಲೀಸ್ ವೃತ್ತ ನಿರೀಕ್ಷಕ ಜಯರಾಮ್, ಪಿಎಸ್‌ಐ ಪ್ರವೀಣ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.