ನುಗ್ಗೇಹಳ್ಳಿ: ಬಾಗೂರು ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸೋಮವಾರ ರಂಜಾನ್ ಹಬ್ಬದ ಪ್ರಯುಕ್ತ ಶ್ರದ್ಧಾಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಗ್ರಾಮದ ಜುಮ್ಮಾ ಮಸೀದಿಯಲ್ಲಿ ಬೆಳಗ್ಗೆ ಪರಸ್ಪರ ಹಬ್ಬದ ಶುಭಾಶಯ ಕೋರಿ ನಂತರ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.
ಸಾಮೂಹಿಕ ಪ್ರಾರ್ಥನೆಯಲ್ಲಿ ತಾಲೂಕು ಮುಸ್ಲಿಂ ಬಳಗದ ಅಧ್ಯಕ್ಷ ಶಮಿವುಲ್ಲಾ ಖಾನ್, ಜುಮ್ಮಾ ಮಸೀದಿ ಅಧ್ಯಕ್ಷ ಪ್ಯಾರೂ ಖಾನ್, ಕಾರ್ಯದರ್ಶಿ ಆಶಮ್, ಸದಸ್ಯ ಅಡಕೆ ಬಾಬು, ಮಹಮ್ಮದ್ ಜಿಕ್ರಿಯ, ಅನ್ಸರ್ ಪಾಷಾ, ಅಲಿ (ಅಲ್ಲಾಭಕ್ಷಿ ), ಸಾದಾತ್, ಜಮ್ಮು, ಇಲಿಯಾಜ್, ಇಮ್ರಾನ್, ರಾವಳ್, ಅಮ್ಜದ್, ರಿಜ್ವಾನ್ ಇತರರು ಇದ್ದರು.