ರೋಣ: ಇತ್ತೀಚಿನ ದಿನಗಳಲ್ಲಿ ಮದುವೆ ಎನ್ನುವುದು ಆಡಂಬರವಾಗಿದೆ. ಸತಿ-ಪತಿಗಳು ಸಾಂಸ್ಕಾರಿಕ ಜೀವನದಲ್ಲಿ ಅನ್ಯೋನ್ಯವಾಗಿ ಜೀವನ ಸಾಗಿಸಬೇಕು. ಸಾಮೂಹಿಕ ವಿವಾಹಗಳು ಬಡವರ ಪಾಲಿಗೆ ವರದಾನವಾಗಿವೆ ಎಂದು ಪುರಸಭೆ ಉಪಾಧ್ಯಕ್ಷ ಮಿಥುನ್ ಪಾಟೀಲ ಹೇಳಿದರು.
ಪಟ್ಟಣದ ಡಾ. ಬಾಬು ಜನಜೀವನರಾಂ ನಗರದ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀ ದುರ್ಗಾದೇವಿ ಮಹಿಳಾ ಮಂಡಳದ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸರ್ವಧರ್ಮಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಸಮಾಜದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುವುದಕ್ಕೆ ಗುರುಗಳು, ಹಿರಿಯರ ಸಹಕಾರ ತುಂಬ ಮುಖ್ಯ ಎಂದರು.
ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಸಂಜಯ ದೊಡ್ಡಮನಿ ಮಾತನಾಡಿ, ಸಮಾಜದಲ್ಲಿ ಸಾಮೂಹಿಕ ವಿವಾಹದಂಥ ಸಮಾಜಮುಖಿ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ನಿಸ್ವಾರ್ಥದಿಂದ ಸಾಮಾಜಿಕ ಕಾರ್ಯ ನೆರವೇರುವುದರಿಂದ ಜನಪರ ಚಿಂತನೆಗೆ ಸಾಕ್ಷಿಯಾಗಿದೆ. ಯುವಕರು ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದರು.
ಸವಡಿ ಮರಳು ಸಿದ್ಧೇಶ್ವರ ಮಠದ ಶ್ರೀ ಮರಳು ಸಿದ್ಧೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಗದಿಗೆಪ್ಪ ಕಿರೇಸೂರು, ವಿಶ್ವನಾಥ ಜಿಡ್ಡಿಬಾಗಿಲು, ಪ್ರಕಾಶ ಹೊಸಳ್ಳಿ, ಮಹಾದೇವಪ್ಪ ತೆಗ್ಗಿನಮನಿ, ಸೋಮಯ್ಯ ದೊಡ್ಡಮನಿ, ದುರಗಪ್ಪ ಹಿರೇಮನಿ, ಬಾಬಾಸಾಬ ಬೇಟಗೇರಿ, ವೀರಪ್ಪ ತೆಗ್ಗಿನಮನಿ, ದಾವಲಸಾಬ ಬಾಡಿನ, ಅಭೀಷೇಕ ಕೊಪ್ಪದ, ಗಂಗವ್ವ ದುರಗಪ್ಪ ತೆಗ್ಗಿನಮನಿ, ಅಮರೇಶ ಹಿರೇಮನಿ, ಶರಣಪ್ಪ ಕಳಸಣ್ಣವರ, ಮಂಜುನಾಥ ಪೂಜಾರ, ರಾಘು ಜೋಗಣ್ಣವರ, ಇತರರು ಇದ್ದರು.