ಜಿಲ್ಲೆ

ಸರ್ವಧರ್ಮ ಸಾಮೂಹಿಕ ವಿವಾಹ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ನವಯುಗ ಸಂಘಟನೆ ವತಿಯಿಂದ ಪ್ರತಿ ವರ್ಷದಂತೆ ಏಪ್ರಿಲ್ 26ರಂದು ಗೋಕುಲ ರಸ್ತೆ ಅಕ್ಷಯ ಪಾರ್ಕ್ ಎದುರಿನ ಸಂತೆ ಮೈದಾನದಲ್ಲಿ ಸರ್ವ ಧರ್ಮ ಸಾಮೂಹಿಕ ವಿವಾಹ ಹಾಗೂ ಉಪನಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ವಧುವಿಗೆ ಬಂಗಾರದ ತಾಳಿ, ಬೆಳ್ಳಿ ಕಾಲುಂಗುರ, ಸೀರೆ, ರವಿಕೆ, ಬಾಸಿಂಗ್ ಹಾಗೂ ವರನಿಗೆ ಪಂಚೆ ಶರ್ಟ್, ಶೆಲ್ಲೆ ಬಾಸಿಂಗ್ ಕೊಡಲಾಗುವುದು.
ವಿವಾಹ ಆಗುವ ವಧು-ವರರಿಗೆ ಕರ್ನಾಟಕ ಸರ್ಕಾರದಿಂದ ಆದರ್ಶ ವಿವಾಹ ಯೋಜನೆ ಅಡಿಯಲ್ಲಿ 10 ಸಾವಿರ ರೂ. ಹಾಗೂ ಸರ್ಕಾರದ ಸರಳ ವಿವಾಹ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜೋಡಿಗೆ 50 ಸಾವಿರ ರೂ. ಅಂತರ್ಜಾತಿ ವಿವಾಹವಾದಲ್ಲಿ 3 ಲಕ್ಷ ರೂ. ಗಳನ್ನು ಸರ್ಕಾರದಿಂದ ಸಿಗಲಿದೆ.

ವಧುವಿಗೆ 18 ವರ್ಷ, ವರನಿಗೆ 21 ವರ್ಷ ಆಗಿರಬೇಕು ಮತ್ತು ಮೊದಲ ವಿವಾಹ ಎಂಬ ಪಂಚರ ದೃಢೀಕರಣ ಪತ್ರ ತರಬೇಕು.
ಆಸಕ್ತರು ಏಪ್ರಿಲ್ 15ರೊಳಗೆ ನಾಗರಾಜ ಕಲಾಲ್, ತೊರವಿ ಹಕ್ಕಲ, ಹುಬ್ಬಳ್ಳಿ ಇಲ್ಲಿ ಹೆಸರು ನೋಂದಾಯಿಸಲು ಸಂಘಟನೆ ಅಧ್ಯಕ್ಷ ಕೃಷ್ಣ ಗಂಡಗಾಳೇಕರ್ ಕೋರಿದ್ದಾರೆ.