ಜಿಲ್ಲೆ

ಅಕ್ಕನ ಬಳಗದಲ್ಲಿ ಸಾಮೂಹಿಕ ವಿವಾಹ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಜೆ.ಸಿ. ನಗರದ ಅಕ್ಕನ ಬಳಗದ ವತಿಯಿಂದ ಭಾನುವಾರ ಸಾಮೂಹಿಕ ವಿವಾಹ ನೆರವೇರಿಸಲಾಯಿತು.

ಬಳಗದ ಅಧ್ಯಕ್ಷೆ ಗೀತಾ ಮುಳ್ಳಳ್ಳಿ, ಜಯಶ್ರೀ ಯಳಮಲಿ ಅವರು ನೇತೃತ್ವ ವಹಿಸಿದ್ದರು. ಹುಬ್ಬಳ್ಳಿಯ ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ನವ ವಧು ವರರಿಗೆ ಆಶೀರ್ವದಿಸಿದರು.

ಬಳಗದ ಕಾರ್ಯದರ್ಶಿ ನಾಗರತ್ನ ಬೆಂಗಳೂರಮಠ, ನಿರ್ಮಲ ಅಂಗಡಿ, ಶಾಂತಾ ಹೊಸಕೋಟಿ, ಮಾಲಾ ಹಿರೇಮಠ, ರೂಪಾ ಹತಿರ್, ಸುಶೀಲ ಹಿರೇಮಠ, ಶಕುಂತಲಾ ಮುಗುಳಿ, ಜಯಶ್ರೀ ವಾಲಿ, ಪ್ರಮೀಳಾ ಹಟ್ಟಿಹೊಳಿ, ವಿಮಲಕ್ಕ ಯಳಮಲಿ, ಇತರರು ಪಾಲ್ಗೊಂಡಿದ್ದರು.