ಸಬ್ಬಲಹುಣಸಿ ಗ್ರಾಮದಲ್ಲಿ ಪಾಂಡುರಂಗ ರುಕ್ಮಿಣಿ 6ನೇ ವಾರ್ಷಿಕ ದಿಂಡಿ ಜಾತ್ರಾ ಮಹೋತ್ಸವದ ಅಂಗವಾಗಿ ಸಾಮೂಹಿಕ ವಿವಾಹ ಸಮಾರಂಭ ಜರುಗಿತು. ಭೀಮಸೇನ ಚಿಮ್ಮನಕಟ್ಟಿ, ಒಪ್ಪತ್ತೇಶ್ವರ ಸ್ವಾಮೀಜಿ, ರಾಮಪ್ಪ ವಾಲಿಕರ, ಬಸಲಿಂಗಯ್ಯ ಸಾರಂಗಮಠ, ಶಾಂತವೀರ ಸ್ವಾಮೀಜಿ, ದೇವಾನಂದ ಬನ್ನಿ ಮತ್ತಿತರರಿದ್ದರು. 
ಜಿಲ್ಲೆ

ಬಡವರಿಗೆ ಸಾಮೂಹಿಕ ವಿವಾಹ ವರದಾನ

ದತ್ತಾತ್ರೇಯ ಪಿ ಕುಲಕರ್ಣಿ

ಗುಳೇದಗುಡ್ಡ: ಸಾಮೂಹಿಕ ವಿವಾಹಗಳು ಬಡವರಿಗೆ ವರದಾನವಾಗಿದ್ದು, ಅನಗತ್ಯ ದುಂದುವೆಚ್ಚಕ್ಕೆ ಕಡಿವಾಣ ಹಾಕುತ್ತವೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಸಬ್ಬಲಹುಣಸಿ ಗ್ರಾಮದಲ್ಲಿ ಪಾಂಡುರಂಗ ರುಕ್ಮಿಣಿ 6ನೇ ವಾರ್ಷಿಕ ದಿಂಡಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು ಪುಣ್ಯವಂತರು. ಸತಿಪತಿಗಳು ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸಿ, ಕಷ್ಟ ಸುಖಗಳನ್ನು ಸಮವಾಗಿ ಸ್ವೀಕರಿಸಿ, ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದು ನವವಿವಾಹಿತ ಜೋಡಿಗಳಿಗೆ ಆಶೀರ್ವದಿಸಿದರು.

ಗುಳೇದಗುಡ್ಡ ಒಪ್ಪತ್ತೇಶ್ವರ ಮಠದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ಸಾಮೂಹಿಕ ವಿವಾಹದಲ್ಲಿ ಮದುವೆಯಾದವರು ಅನೋನ್ಯವಾಗಿ ಜನ ಮೆಚ್ಚುವಂತೆ ಬದುಕು ನಡೆಸಬೇಕು. ತಂದೆ ತಾಯಿ, ಅತ್ತೆ ಮಾವಂದಿರನ್ನು ಗೌರವಯುತವಾಗಿ ನೋಡಿಕೊಳ್ಳಬೇಕು ಎಂದರು.

ನಾಗರಾಳ ಎಸ್‌ಪಿ ಗ್ರಾಪಂ ಉಪಾಧ್ಯಕ್ಷ ರಾಮಪ್ಪ ವಾಲಿಕರ ಅಧ್ಯಕ್ಷತೆವಹಿಸಿ ಮಾತನಾಡಿದರು. ಐದು ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಬಸಲಿಂಗಯ್ಯ ಸಾರಂಗಮಠ, ಶಾಂತವೀರ ಸ್ವಾಮೀಜಿ, ದೇವಾನಂದ ಬನ್ನಿ, ಎಚ್.ಕೆ. ಪತ್ತಾರ, ಲೆಂಕೆಪ್ಪ ಹಿರೇಕುರುಬರ, ಮೋತಿಲಾಲ ರಾಠೋಡ, ಜಗದೀಶ ಕೋರಿ, ಗ್ರಾಪಂ ಉಪಾಧ್ಯಕ್ಷ ಯಲ್ಲಪ್ಪ ಹಿರೇಹಾಳ, ಸದಸ್ಯರಾದ ಕರಿಯಪ್ಪ ನರಟ್ಟಿ, ಹನುಮಪ್ಪ ಐಹೊಳ್ಳಿ, ಗೋಪಾಲ ಜಕ್ಕಪ್ಪನವರ, ಶ್ಯಾವಕ್ಕ ನಡಶೇಸಿ, ಮಂಜುನಾಥ ವಾಲೀಕರ, ದ್ಯಾವಪ್ಪ ನರಟ್ಟಿ, ಭೀಮಪ್ಪ ನಡಸೇಸಿ ಮತ್ತಿತರರಿದ್ದರು.