ಜಿಲ್ಲೆ

ಮಾರ್ಚ್ 10ರಂದು ಸಾಮೂಹಿಕ ವಿವಾಹ ಮಹೋತ್ಸವ

Chitradurga

ಚಿತ್ರದುರ್ಗ: ನಗರದ ಹೊರವಲಯ ಕ್ಯಾದಿಗೆರೆ ರಾ.ಹೆ 4ರ ಸರ್ವಿಸ್ ರಸ್ತೆ ಸಮೀಪದಲ್ಲಿ ಮಾಜಿ ಎಂಎಲ್‌ಸಿ ಜಿ.ರಘುಆಚಾರ್ ಅವರು ನಿರ್ಮಿಸಿ ರುವ ನೂತನ ಮನೆ ಗೃಹ ಪ್ರವೇಶದ ಅಂಗವಾಗಿ ಮಾರ್ಚ್ 10ರಂದು ಅಲ್ಲಿ ಸಾಮೂಹಿಕ ವಿವಾಹ ಮಹೋತ್ಸವ ಏರ್ಪಡಿಸಿರುವುದಾಗಿ ಅಖಿಲ ಭಾರತ ವಿಶ್ವಕರ್ಮ ಪರಿಷತ್ ರಾಜ್ಯಾಧ್ಯಕ್ಷ ಆರ್.ಪ್ರಸನ್ನ ಕುಮಾರ್ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಈ ವಿವಾಹ ಮಹೋತ್ಸವದಲ್ಲಿ ವಧುವರರಿಗೆ ಚಿನ್ನದ ಮಾಂಗಲ್ಯ, ಕಾಲುಂ ಗುರ,ಸೀರೆ,ಶರ್ಟ್,ಪಂಚೆ,ಶಲ್ಯ ಹಾಗೂ ಹೊಲಿಗೆ ಯಂತ್ರ ವಿತರಿಸಲಾಗುವುದು. ವಧು-ವರರು ಆಧಾರ್ ಕಾರ್ಡ್,ವಯಸ್ಸಿನ ಧೃಡೀ ಕರಣ ಪತ್ರ,ಪಾಸ್‌ಪೋರ್ಟ್ ಅಳತೆ ಎರಡು ಭಾವಚಿತ್ರ ಹಾಗೂ ಪಾಲಕರ ಒಪ್ಪಿಗೆ ಪತ್ರದೊಂದಿಗೆ ಮಾರ್ಚ್ 5ರ ಸಂಜೆ 6ರೊಳಗೆ ನೋಂ ದಾಯಿಸಬೇಕು. ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗೆ 9036832467/9844432644/9880121005/ 9663887496ಗೆ ಸಂಪರ್ಕಿಸಬಹುದೆಂದರು.

ಗೃಹ ಪ್ರವೇಶದ ಸಂದರ್ಭದಲ್ಲೇ ಮನೆಯ ಸಮೀಪದಲ್ಲಿ ರಘು ಆಚಾರ್ ಅವರು,12 ಎಕರೆ ವಿಸ್ತೀರ್ಣ ಹಾಗೂ ಅಂದಾಜು 360 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುತ್ತಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಭೂಮಿ ಪೂಜೆ ನೆರವೇರಲಿದೆ ಎಂದರು. ಆಶಾರಘುಆಚಾರ್,ಸತ್ಯವತಿ,ಸರಸ್ವತಿ,ಕ್ಯಾದಿಗೆರೆ ತಿಪ್ಪೇಸ್ವಾಮಿ ಇದ್ದರು.

----