ಬಳಗಾನೂರಿನ ಮಾರುತಿ ದೇವಸ್ಥಾನದಲ್ಲಿ ಕಲ್ಯಾಣ ಕರ್ನಾಟಕ ಶ್ರೀ ವೈಷ್ಣವ ಸಮುದಾಯದಿಂದ ಸಾಮೂಹಿಕ ಧರ್ಮೋಪನಯನ ಕಾರ್ಯಕ್ರಮ ಶುಕ್ರವಾರ ನಡೆಯಿತು. 
ಜಿಲ್ಲೆ

ಸಾಮೂಹಿಕ ಧರ್ಮೋಪನಯ ಕಾರ್ಯಕ್ರಮ ಸಂಪನ್ನ

Gangavati - Desk - Veeresh S Ullagaddi

ಮಸ್ಕಿ: ಬಳಗಾನೂರಿನ ಮಾರುತಿ ದೇವಸ್ಥಾನದಲ್ಲಿ ಕಲ್ಯಾಣ ಕರ್ನಾಟಕ ಶ್ರೀ ವೈಷ್ಣವ ಸಮುದಾಯದಿಂದ ಆಯೋಜಿಸಿದ್ದ ಸಾಮೂಹಿಕ ಧರ್ಮೋಪನಯನ ಕಾರ್ಯಕ್ರಮ ಶುಕ್ರವಾರ ಸಂಪನ್ನಗೊಂಡಿತು.

ಮಾರುತಿ ಮೂರ್ತಿಗೆ ವಿಶೇಷ ಅಲಂಕಾರ

ಕೂಡ್ಲಿಗಿಯ ಮುರಳಿ ಶರ್ಮ, ರಾಮಮೂರ್ತಿ ರಂಗನಾಥ, ಅನಂತಮೂರ್ತಿ ಪೌರೋಹಿತ್ಯದಲ್ಲಿ ಹೋಮ-ಹವನ ಪೂಜಾ ಕಾರ್ಯಕ್ರಮಗಳು ನೆರವೇರಿದವು. 18 ವಟುಗಳಿಗೆ ಧರ್ಮೋಪನಯನ ನೀಡಲಾಯಿತು. ಬಳ್ಳಾರಿ ಜಿಲ್ಲೆ, ಆಂಧ್ರಪ್ರದೇಶದ ಕೌತಾಳಂ ಹಾಗೂ ಇತರೆಡೆಯಿಂದ ವಟುಗಳು ಆಗಮಿಸಿದ್ದರು. ನಂತರ ಅನ್ನ ಸಂತರ್ಪಣೆ, ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಮಾರುತಿ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಕಲ್ಯಾಣ ಕರ್ನಾಟಕ ಶ್ರೀ ವೈಷ್ಣವ ಸಮುದಾಯದ ಪ್ರಮುಖರ ಸಮ್ಮುಖದಲ್ಲಿ ಗುರುವಾರ ದೇವರ ಸಮಾರಾಧನೆ, ನಂದಿ ಪೂಜೆ ಕಾರ್ಯಕ್ರಮ ನಡೆದವು.