ಜಿಲ್ಲೆ

ಸಂತ ಅನ್ನಮ್ಮ ಶಾಲೆಯಲ್ಲಿ ಛದ್ಮವೇಷ ಸ್ಪರ್ಧೆ

ಕಿರಣ್ ಗೌಡ.ಜಿ

ಸಿದ್ದಾಪುರ: ಸ್ಪರ್ಧಾತ್ಮಕ ಯುಗದಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ಮೌಲ್ಯಾಧಾರಿತ ಶಿಕ್ಷಣದ ಅಗತ್ಯ ಇದೆ ಎಂದು ಸಂತ ಅನ್ನಮ್ಮ ಮಾಧ್ಯಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಅರ್ಪಿತಾ ಕರೆ ತಿಳಿಸಿದರು.

ಸಂತ ಅನ್ನಮ್ಮ ಶಾಲೆ ಕೇಂದ್ರ ಮಾಧ್ಯಮಿಕ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಛದ್ಮವೇಷ ಸ್ಪರ್ಧೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಣದ ಜತೆಗೆ ಆಹಾರ,ಪರಿಸರ, ಕಲೆ , ಸಾಹಿತ್ಯ, ಕ್ರೀಡಾಕೂಟಗಳು ವಿದ್ಯಾರ್ಥಿಗಳ ಭೌತಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.

ಬಾಲವಾಡಿ, ಎಲ್‌ಕೆಜಿ, ಹಾಗೂ ಯುಕೆಜಿ ಮಕ್ಕಳು ಹೂವು, ಹಣ್ಣು, ತರಕಾರಿಗಳ ಉಡುಗೆ ಧರಿಸಿ ಅವುಗಳ ಗುಣ ಲಕ್ಷಣಗಳು ಹಾಗೂ ಉಪಯೋಗಗಳ ಬಗ್ಗೆ ಮಾಹಿತಿ ನೀಡಿ ರಂಜಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಪುಟಾಣಿ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ತೀರ್ಪುಗಾರರಾಗಿ ಬಿ.ಜಿ. ಭಾಗ್ಯಲಕ್ಷ್ಮೀ, ವಿಕ್ಕಿ ಮಾಸ್ಟರ್ ಕಾರ್ಯನಿರ್ವಹಿಸಿದರು. ಅನ್ನಮ್ಮ ಶಾಲೆಯ ವ್ಯವಸ್ಥಾಪಕಿ ಸಿಸ್ಟರ್ ಮಾರ್ಜರಿ, ಪ್ರಾಂಶುಪಾಲೆ ಸಿಸ್ಟರ್ ಲೆನಿಟ್, ಶಿಕ್ಷಕಿಯರಾದ ಲೇನಿ, ಸುನೀತಾ, ತೆರೇಸಾ, ಪಾಲಕರು ಹಾಜರಿದ್ದರು.