ಮಸ್ಕಿ ಪಟ್ಟಣದ ಪಾರ್ವತಿ ನಗರದಲ್ಲಿ ಚಿಣ್ಣರು ಬಣ್ಣದ ಆಟದಲ್ಲಿ ಸಂಭ್ರಮಿಸುತ್ತಿರುವುದು. 
ಜಿಲ್ಲೆ

ಬಣ್ಣ ಎರಚಿಕೊಂಡು ಸಂಭ್ರಮಿಸಿದ ಚಿಣ್ಣರು

ಪ್ರವೀಣ ಉದುಸಾ ದಲಬಂಜನ್

ಮಸ್ಕಿ: ಪಟ್ಟಣದಲ್ಲಿ ಬುಧವಾರ ಚಿಣ್ಣರು ಒಬ್ಬರಿಗೊಬ್ಬರು ಗುಲಾಲ್ ಎರಚಿಕೊಂಡು ಸಂಭ್ರಮಿಸಿದರು. ಓಣಿಗಳಲ್ಲಿ ಯುವಕರು ಪರಸ್ಪರ ಬಣ್ಣಗಳಲ್ಲಿ ಮಿಂದೆದ್ದರು. ಯುವಕರು ತಂಡ ತಂಡಗಳಾಗಿ ಗಲ್ಲಿ ಗಲ್ಲಿಗಳಲ್ಲಿ ನಾ ಮುಂದು ನೀ ಮುಂದು ಎಂದು ಬಣ್ಣ ಆಡುತ್ತಿದ್ದರು. ಈಗ ಆದೆಲ್ಲ ಮಾಯವಾಗಿ ಯುವಕರು ಬಣ್ಣ ಆಡುವದನ್ನು ನಿಲ್ಲಿಸಿ ತೋಟ ಪಟ್ಟಿಗಳಲ್ಲಿ ವಿವಿಧ ಭಕ್ಷ್ಯ ಭೋಜನಕ್ಕಾಗಿ ಹೊರಗಡೆ ಹೋಗುವ ಸಂಪ್ರದಾಯ ಬೆಳಿಸಿಕೊಂಡಿದ್ದಾರೆ ಎಂದು ಮಲ್ಲಿಕಾರ್ಜುನ ಕಂದಗಲ್ ತಿಳಿಸಿದರು.