ಮಸ್ಕಿ ಪಟ್ಟಣದ ಮಲ್ಲೇಶಪ್ಪ ಬ್ಯಾಳಿ ಅವರಿಗೆ ಯುವ ಬ್ರಿಗೇಡ್ ಕಾರ್ಯಕರ್ತರು ರಾಷ್ಟ್ರಧ್ವಜ ನೀಡಿ ಕುಟುಂಬದವರನ್ನು ಸತ್ಕರಿಸಿದರು. ಬ್ರಿಗೇಡ್ ಸಂಚಾಲಕ ದೇವರಾಜ, ಡಾ.ಮಲ್ಲಿಕಾರ್ಜುನ ಇತ್ಲಿ, ಅಮರೇಶ ಹರಸೂರು ಇದ್ದರು. 
ಜಿಲ್ಲೆ

ಸ್ವಾತಂತ್ರ್ಯಶ್ರಾವಣಕ್ಕೆ ವೀರಾಕ್ಷತೆ ಸಂಗ್ರಹ

ಮಸ್ಕಿ: ಯುವ ಬ್ರಿಗೇಡ್ ಕಾರ್ಯಕರ್ತರು ಸ್ವಾಂತಂತ್ರ್ಯ ಶ್ರಾವಣಕ್ಕೆ ರಾಜ್ಯದ ಸೈನಿಕರ ಮನೆಯಿಂದ ಆಶೀರ್ವಾದ ರೂಪದಲ್ಲಿ ವೀರಾಕ್ಷತೆ (ಅಕ್ಕಿ ಸಂಗ್ರಹ)ಕ್ಕೆ ಮುಂದಾಗಿದ್ದಾರೆ.

ಪಟ್ಟಣದ ಮಲ್ಲೇಶಪ್ಪ ಬ್ಯಾಳಿ ಅವರ ಮನೆಗೆ ಗುರುವಾರ ಯುವ ಬ್ರಿಗೇಡ್ ಕಾರ್ಯಕರ್ತರು ತೆರಳಿ, ರಾಷ್ಟ್ರ ಧ್ವಜ ನೀಡಿ ಕುಟುಂಬದವರನ್ನು ಸತ್ಕರಿಸಿದರು.

ಸೇನೆಯಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿವಾನಂದ ಬ್ಯಾಳಿ ಮತ್ತು ಸದಾನಂದ ಬ್ಯಾಳಿ, ಮಲ್ಲೇಶಪ್ಪ ಬ್ಯಾಳಿಯವರ ಸುಪುತ್ರರಾಗಿದ್ದು ನಾಡು ಹೆಮ್ಮೆ ಪಡುವಂತೆ ವೀರ ಸೇನಾನಿಗಳನ್ನು ದೇಶ ಸೇವೆ ಮಾಡಲು ಕೊಟ್ಟು ಪಟ್ಟಣದ ಹೆಸರನ್ನು ಚಿರಸ್ಥಾಯಿಯಾಗಿಸಿದ್ದೀರಿ ಯುವ ಬ್ರಿಗೇಡ್ ಸಂಚಾಲಕ ದೇವರಾಜ ಹೇಳಿದರು.

ಬೆಂಗಳೂರಿನಲ್ಲಿ ಆ.13, 14 ಮತ್ತು 15 ರಂದು ಸ್ವಾಂತಂತ್ರ್ಯ ಶ್ರಾವಣ ಕಾರ್ಯಕ್ರಮ ಜರುಗಲಿದೆ ಎಂದು ದೇವರಾಜ ತಿಳಿಸಿದರು. ಡಾ.ಮಲ್ಲಿಕಾರ್ಜುನ ಇತ್ಲಿ, ಅಮರೇಶ ಹರಸೂರು ಇದ್ದರು.