ಮಸ್ಕಿ: ದಲಿತರು ಶೋಷಣೆಗೆ ಒಳಗಾಗಿದ್ದು, ಅವರ ಬದುಕಿನ ಒಳನೋಟಗಳು ಸಾಹಿತ್ಯದಲ್ಲಿ ಹೊರಹೊಮ್ಮಲಿ ಎಂದು ಮಸ್ಕಿ ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಗಚ್ಚಿನ ಹಿರೇಮಠದ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಲಿತ ಸಾಹಿತ್ಯ ಪರಿಷತ್ತ ತಾಲೂಕು ಘಟಕ ಹಾಗೂ ದಲಿತ ಸಾಹಿತ್ಯ ಪರಿಷತ್ತ ತಾಲೂಕು ಯುವ ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು. ಜನರಲ್ಲಿ ಶಿಕ್ಷಣದ ಅರಿವು ಮೂಡಿಸುವ ಅವಶ್ಯಕವಾಗಿದೆ ಎಂದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರೂ ನಮ್ಮೆಲ್ಲರ ದಾರಿದೀಪವಾಗಿದ್ದಾರೆ. ಅವರಂತೆ ಪ್ರತಿಯೊಬ್ಬರು ಬದಕೋಣ ಎಂದರು.
ದಲಿತ ಸಾಹಿತಿ ಸಿ.ದಾನಪ್ಪ ನಿಲೋಗಲ್ ಮಾತನಾಡಿ, ಇಂದಿನ ದಿನಮಾನಗಳಲ್ಲಿ ದಲಿತ ಸಾಹಿತ್ಯ ಸವಾಲಿನ ಕೆಲಸವಾಗಿದೆ. ಆದ್ದರಿಂದ ನಾವೆಲ್ಲರೂ ಸಾಹಿತ್ಯದ ಬಗ್ಗೆ ಹೆಚ್ಚಿನ ಗಮನ ಕೊಡಬೇಕು ಎಂದರು.
ನೂತನವಾಗಿ ಮಸ್ಕಿ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾದ ನಾಗೇಶ ಜಂಗಮರಹಳ್ಳಿ ಮಾತನಾಡಿದರು. ಕ್ರಾಂತಿಗೀತೆಗಳನ್ನು ಗಂಗಾಧರ ಹಿರಿಯ ಹೋರಾಟಗಾರರು ಹಾಗೂ ಸಂಗಡಿಗರು ಹಾಡಿದರು.
ಬ್ಲಾಕ್ ಕಾಂಗ್ರೆಸ್‌ನ ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ, ಲಿಂಗಸುಗೂರು ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಅಮರೇಶ ವೆಂಕಟಾಪುರ, ಶಿಕ್ಷಕರಾದ ಬಾಲಸ್ವಾಮಿ ಹಂಪನಾಳ, ಪಂಪಾಪತಿ ಹೂಗಾರ, ಹನುಮಂತ ನಾಯಕ, ವೀರೇಶ್ ಮೈಬೂಬ್‌ಸಾಬ್ ಮುದ್ದಾಪುರ, ಅಬ್ದುಲ್ ಗನಿಸಾಬ್ ಹನುಮಂತಪ್ಪ ಕಾಟಗಲ್, ಆನಂದ್ ಜೋಗಿನ್, ರಾಮಪ್ರಸಾದ್ ಚಿಗರಿ ಗ್ಯಾನಪ್ಪ ಇತರರಿದ್ದರು.