ಸ್ವಯಂ ಉದ್ಯೋಗ ಕೌಶಲ ರಥವನ್ನು ಮಸ್ಕಿ ತಾಪಂ ಇಒ ಅಮರೇಶ ಶುಕ್ರವಾರ ವೀಕ್ಷಿಸಿದರು.  
ಜಿಲ್ಲೆ

ಸ್ವ ಉದ್ಯೋಗಕ್ಕೆ ಕೌಶಲ ರಥ ಸದ್ಬಳಕೆಯಾಗಲಿ

Raichur

ಮಸ್ಕಿ: ಸ್ವಯಂ ಉದ್ಯೋಗ ಕೈಗೊಳ್ಳಲು ರಾಜ್ಯ ಸರ್ಕಾರ ಒಂದು ತಿಂಗಳು ಉಚಿತವಾಗಿ ನೀಡುವ ಕೌಶಲ ತರಬೇತಿಯನ್ನು ತಾಲೂಕಿನ ಯುವ ಸಮೂಹ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಾಪಂ ಇಒ ಅಮರೇಶ ಸಲಹೆ ನೀಡಿದರು.

ತಾಪಂ ಕಚೇರಿ ಎದುರು ಶುಕ್ರವಾರ ಕೌಶಲ ರಥ ವೀಕ್ಷಿಸಿ ಮಾತನಾಡಿದರು. ಉದ್ಯಮಿಯಾಗು ಉದ್ಯೋಗ ನೀಡು ಎಂಬುದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಇದರ ಭಾಗವಾಗಿ ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದಿಂದ ನಿರುದ್ಯೋಗ ಯುವಕ, ಯುವತಿಯರಿಗೆ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ತರಬೇತಿ ನೀಡಲಾಗುತ್ತದೆ. ಕೌಶಲ ರಥವಾಗಿ ಮಾರ್ಪಟ್ಟಿರುವ ಬಸ್‌ನಲ್ಲಿ ಸಕಲ ಸೌಕರ್ಯ, ಸಾಮಗ್ರಿಗಳನ್ನು ಅಳವಡಿಸಲಾಗಿದೆ. ಎಲೆಕ್ಟ್ರಿಕಲ್, ಟೆಕ್ನಿಷಿಯನ್ ತರಬೇತಿ ನೀಡಲಾಗುತ್ತಿದೆ. ಅರ್ಜಿ ಸಲ್ಲಿಕೆಗೆ ಇನ್ನೂ ಅವಕಾಶವಿದೆ ಎಂದರು.