ಮಸ್ಕಿಯ ಶ್ರೀ ಭ್ರಮರಾಂಬ ಸಹಕಾರಿ ಸಂಘದ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವಾರ್ಷಿಕ ಸಾಮಾನ್ಯ ಸಭೆಯನ್ನು ಸಂಘದ ಅಧ್ಯಕ್ಷ ಡಾ.ಶಿವಶರಣಪ್ಪ ಇತ್ಲಿ ಉದ್ಘಾಟಿಸಿದರು. ಉಪಾಧ್ಯಕ್ಷ ಪಂಪಣ್ಣ ಗುಂಡಳ್ಳಿ, ಪ್ರಧಾನ ವ್ಯವಸ್ಥಾಪಕ ವೀರೇಶ ಹಿರೇಮಠ ಇದ್ದರು. 
ಜಿಲ್ಲೆ

ಸದಸ್ಯರಿಗೆ ಶೇ.15 ಲಾಭಾಂಶ ವಿತರಣೆ

ಮಸ್ಕಿ: ಶ್ರೀ ಭ್ರಮರಾಂಬ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಸದಸ್ಯರಿಗೆ ಪ್ರಸಕ್ತ ವರ್ಷ ಶೇ.15 ಲಾಭಾಂಶ ವಿತರಣೆ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಡಾ.ಶಿವಶರಣಪ್ಪ ಇತ್ಲಿ ಹೇಳಿದರು.

ಪಟ್ಟಣದ ಶ್ರೀ ಭ್ರಮರಾಂಬ ಕಚೇರಿಯಲ್ಲಿ ಆಯೋಜಿಸಿದ್ದ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ 25 ವರ್ಷಗಳಲ್ಲಿ ಒಂಬತ್ತು ಶಾಖಾ ಕಚೇರಿಗಳನ್ನು ಸ್ಥಾಪಿಸಿ, 35 ಸಾವಿರಕ್ಕೂ ಹೆಚ್ಚು ಸದಸ್ಯರಿಂದ 803 ಕೋಟಿ ರೂ. ವ್ಯವಹಾರ ಮಾಡಿ ಹೊಸ ಮೈಲಿಗಲ್ಲು ಸಾಧಿಸಿದೆ.

451 ಕೋಟಿ ರೂ. ಠೇವಣಿ ಸಂಗ್ರಹಿಸಿದೆ. ಅದರಲ್ಲಿ 352 ಕೋಟಿ ರೂ. ವಿವಿಧ ರೀತಿಯ ಸಾಲಗಳನ್ನು 13,778 ಜನರಿಗೆ ವಿತರಿಸಲಾಗಿದೆ. ಸಾಲ ವಸೂಲಾತಿಯಲ್ಲಿ ಶೇ.97 ಗುರಿ ಸಾಧಿಸಲಾಗಿದೆ ಎಂದರು.

ಸಂಘದ ಉಪಾದ್ಯಕ್ಷ ಪಂಪಣ್ಣ ಗುಂಡಳ್ಳಿ ಮಾತನಾಡಿದರು. ಪ್ರಧಾನ ವ್ಯವಸ್ಥಾಪಕ ವೀರೇಶ ಹಿರೇಮಠ ಅವರು ಸಹಕಾರಿಯ ಆರ್ಥಿಕ ಹಾಗೂ ಮುಂದಿನ ಕಾರ್ಯಚಟುವಟಿಕೆ ಕುರಿತು ವಿವರಿಸಿದರು. ಉದ್ಯೋಗ ಈರಯ್ಯ ಇದ್ದರು.