ಜಿಲ್ಲೆ

ಮಸ್ಕಿಯಲ್ಲಿ ಸಿಹಿ ಪಾನಕ ವಿತರಣೆ

ಮಸ್ಕಿ: ಪಟ್ಟಣದಲ್ಲಿ ಬುಧವಾರ ಮಹಾಮನೆ ಸಮಿತಿ, ಬಸವ ಜಯಂತಿ ಆಚರಣೆ ಸಮಿತಿ ಹಾಗೂ ಶರಣ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಬಸವ ಜಯಂತಿ ಆಚರಿಸಲಾಯಿತು. ಭ್ರಮರಾಂಬ ದೇವಸ್ಥಾನದ ಆವರಣದಲ್ಲಿ ಬಸವಣ್ಣ ಅವರ ಭಾವಚಿತ್ರ ಮೆರವಣಿಗೆಗೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಚಾಲನೆ ನೀಡಿದರು. ಕನಕವೃತ್ತ, ದೈವದಕಟ್ಟೆ, ಖಲೀಲವೃತ್ತ, ಅಗಸಿ ಮುಂಭಾಗದಿಂದ ಹಳೇ ಬಸ್ ನಿಲ್ದಾಣದ ಮೂಲಕ ದೇವಸ್ಥಾನಕ್ಕೆ ಮೆರವಣಿಗೆ ಸಮಾಪ್ತಿಗೊಂಡಿತು. ಅನ್ನಪೂರ್ಣ ನರ್ಸಿಂಗ್ ಹೊಮ್, ಬಿಬಿಎಂ ಕಿರಾಣಿ ಅಂಗಡಿ ಮುಂಭಾಗದಲ್ಲಿ ಸಿಹಿ ಪಾನಕ ವಿತರಿಸಲಾಯಿತು. ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಸರ್ಕಾರಿ ಕಚೇರಿ ಹಾಗೂ ಶಾಲಾ ಕಾಲೇಜುಗಳಲ್ಲಿ ಸೇರಿ ವಿವಿಧೆಡೆ ಬಸವ ಜಯಂತಿ ಆಚರಿಸಲಾಯಿತು.

ಪ್ರಮುಖರಾದ ಡಾ.ಶಿವಶರಣಪ್ಪ ಇತ್ಲಿ, ಡಾ.ಬಿ.ಎಚ್.ದಿವಟರ್, ದುರುಗಣ್ಣ ಮಾಸ್ತಾರ, ಮಹಾಂತೇಶ ಮಸ್ಕಿ, ಬಸವರಾಜಪ್ಪ ಮಿಟ್ಟಿಮನಿ, ಮಲ್ಲಿಕಾರ್ಜುನ ಕಂದಗಲ್, ಪ್ರಕಾಶ ಧಾರಿವಾಲ್, ಅಮರಪ್ಪ ಅಂಗಡಿ, ಸಿದ್ದಲಿಂಗಯ್ಯ ಹಚ್ಚಿನಮಠ, ಆದಯ್ಯಸ್ವಾಮಿ ಕ್ಯಾತ್ನಟ್ಟಿ, ಸಿದ್ದಲಿಂಗಯ್ಯ ಸೊಪ್ಪಿಮಠ, ಮಲ್ಲಪ್ಪ ಕುಡತನಿ, ಸುಗಣ್ಣ ಬಾಳೆಕಾಯಿ, ಅಮರೇಶ ಬ್ಯಾಳಿ, ಎಂ.ಅಮರೇಶ, ಶರಣಪ್ಪ ಎಲಿಗಾರ, ತಿಪ್ಪಣ್ಣ ಯಂಬಲದ, ಉಮಾಕಾಂತಪ್ಪ ಸಂಗನಾಳ, ಸಿ.ದಾನಪ್ಪ, ಶರಣಯ್ಯ ಸೊಪ್ಪಿಮಠ, ಮೌನೇಶ ನಾಯಕ, ಮಲ್ಲಿಕಾರ್ಜುನ ನಾಯನೆಗಲಿ, ಬಸವರಾಜಪ್ಪ ಕಡಿ, ದಯಾನಂದ ಜೋಗಿನ್, ಶಿವರಾಜ ಇತ್ಲಿ, ಬಸವಲಿಂಗ ಶಟ್ಟಿ ಇತರರಿದ್ದರು.