ಮಸ್ಕಿ: ಸರ್ಕಾರದ ಸೌಲಭ್ಯ ಪಡೆಯಲು ಶಿಕ್ಷಣ ಅಗತ್ಯವಾಗಿದ್ದು ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ಜಿಲ್ಲಾ ಅಧ್ಯಕ್ಷ ಈರಣ್ಣ ಹೂಗಾರ ಹೇಳಿದರು.
ತಾಲೂಕಿನ ಹೂಗಾರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.
ಪಟ್ಟಣದ ಗಚ್ಚಿನಮಠದಲ್ಲಿ ಹೂಗಾರ ಸಮುದಾಯದಿಂದ ಹಮ್ಮಿಕೊಂಡಿದ್ದ ಸಂಘದ ಸಭೆಯಲ್ಲಿ ಶ್ರೀಶರಣ ಹೂಗಾರ ಮಾದಯ್ಯನವರ ಪೂಜಾ ಕಾರ್ಯಕ್ರಮವನ್ನು ಗಚ್ಚಿನ ಹಿರೇಮಠದ ಶ್ರೀವರರುದ್ರಮುನಿ ಶಿವಾಚಾರ್ಯರು ಪೂಜೆ ನೆರವೇರಿಸಿದರು. ಉಪಾಧ್ಯಕ್ಷ ಲಿಂಗರಾಜ ಹೂಗಾರ, ಪಂಪಾಪತಿ ಹೂಗಾರ, ಮಲ್ಲಪ್ಪ ಹೂಗಾರ ಮುದಗಲ್, ಮಲ್ಲಿಕಾರ್ಜುನ ಹೂಗಾರ ಸಿರವಾರ, ಭೀಮಣ್ಣ ಹೂಗಾರ ಸಿಂಧನೂರು ಇತರರಿದ್ದರು.
ಪದಾಧಿಕಾರಿಗಳುಃ ಮಸ್ಕಿ ತಾಲೂಕಿಗೆ ನೂತನವಾಗಿ ಹೂಗಾರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಮರೇಶ ಹೂಗಾರ ಗೂಗೆಬಾಳ (ಅಧ್ಯಕ್ಷ), ಬಸಣ್ಣ ಬೆಲ್ಲದಮರಡಿ (ಗೌರವ ಅಧ್ಯಕ್ಷ), ಬಸವರಾಜ ಹೂಗಾರ ಮಾರಲದಿನ್ನಿ, ಜಂಬಣ್ಣ ಹೂಗಾರ ಅಮಿನಗಡ (ಉಪಾಧ್ಯಕ್ಷ), ನಾಗಪ್ಪ ದಿನ್ನಿ (ಕಾನೂನು ಸಲಹೆಗಾರ) ಅಮರೇಶ ಹೂಗಾರ ಉದ್ಬಾಳ (ಕಾರ್ಯದರ್ಶಿ), ವೀರೇಶ ಹೂಗಾರ (ಕೋಶಾಧ್ಯಕ್ಷ), ರವಿ ಹೂಗಾರ, ಮಲ್ಲಯ್ಯ ಹೂಗಾರ ಹೂವಿನಬಾವಿ (ಸಂಘಟನಾ ಕಾರ್ಯದರ್ಶಿ), ರಮೇಶ ಹೂಗಾರ,ಬಸವರಾಜ ಹೂಗಾರ ಮೆದಕಿನಾಳ, (ಜಂಟಿ ಕಾರ್ಯದರ್ಶಿ) ಆಯ್ಕೆಯಾಗಿದ್ದಾರೆ.