ಮಸ್ಕಿ ಸರ್ಕಾರಿ ಪ್ರಾಥಮಿಕ ಕೇಂದ್ರ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಎಚ್.ನರಸಿಂಹಯ್ಯರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಅಶ್ವಿನಿ, ಶಬಾನಾ, ಚನ್ನಮ್ಮ, ಸಾವಿತ್ರಿ, ನಿರ್ಮಲಾ, ವೀಣಾ, ಮಂಜುಳಾ, ಬನಶ್ರೀ ಇದ್ದರು. 
ಜಿಲ್ಲೆ

ವೈಜ್ಞಾನಿಕ ವಿಚಾರಧಾರೆಗಳನ್ನು ರೂಢಿಸಿಕೊಳ್ಳಲು ಶಿಕ್ಷಕಿ ಅಶ್ವಿನಿ ಸಲಹೆ

Raichur

ಮಸ್ಕಿ: ಆಧುನಿಕವಾದ ಈ ಕಾಲದಲ್ಲಿ ಮೂಢನಂಬಿಕೆಯನ್ನು ಧಿಕ್ಕರಿಸಬೇಕಿದೆ. ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಪ್ರತಿಯೊಂದನ್ನು ಪ್ರಶ್ನಿಸಿ ಒಪ್ಪಿಕೊಳ್ಳುವ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕಾಗಿದೆ ಎಂದು ಶಿಕ್ಷಕಿ ಅಶ್ವಿನಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಾಥಮಿಕ ಕೇಂದ್ರ ಶಾಲೆಯಲ್ಲಿ ಸೋಮವಾರ ಡಾ.ಎಚ್.ನರಸಿಂಹಯ್ಯರ ಪುಣ್ಯತಿಥಿ ಅಂಗವಾಗಿ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಚ್.ನರಸಿಂಹಯ್ಯರ ಬಾಲ್ಯ, ಶಿಕ್ಷಣ ಹಾಗೂ ವೈಜ್ಞಾನಿಕ ಚಿಂತನೆಗಳ ಕುರಿತು ಮಾಹಿತಿ ನೀಡಿದರು. ಪರಿಷತ್ತಿನ ಸ್ಥಳೀಯ ಘಟಕದ ಅಧ್ಯಕ್ಷೆ ಶಬಾನಾ ಪರಿಷತ್ತಿನ ಸದಸ್ಯತ್ವ ಅಭಿಯಾನ ಕುರಿತು ಮಾಹಿತಿ ನೀಡಿದರು. ಪರಿಷತ್ತಿನ ಜಿಲ್ಲಾ ಘಟಕದ ನಿರ್ದೆಶಕಿ ಚನ್ನಮ್ಮ, ಶಿಕ್ಷಕರಾದ ಜಗದೀಶ, ಸಾವಿತ್ರಿ, ನಿರ್ಮಲಾ, ವೀಣಾ, ಮಂಜುಳಾ, ಬನಶ್ರೀ, ಶೈಲಜಾ, ಭೀಮಪ್ಪ, ಮಹಾಂತೇಶ, ಯಮನೂರಪ್ಪ ಇತರರು ಇದ್ದರು.