ಸಂತೆಕೆಲ್ಲೂರು ಗ್ರಾಪಂ ಪಿಡಿಒಗೆ ಬಿಜೆಪಿ ಮಂಡಲ ಮನವಿ ಸಲ್ಲಿಸಿತು. ಮಂಡಲ ಅಧ್ಯಕ್ಷ ಶರಣಯ್ಯ ಸೊಪ್ಪಿಮಠ, ಮುಖಂಡರಾದ ಬಸವಂತರಾಯ ಕುರಿ, ಪ್ರಸನ್ನ ಪಾಟೀಲ್, ತಾಪಂ ಮಾಜಿ ಸದಸ್ಯ ಗವಿಸಿದ್ದಪ್ಪ ಸಂತೆಕೆಲ್ಲೂರು, ಗ್ರಾಪಂ ಸದಸ್ಯ ಮಲ್ಲಯ್ಯ ನಾಯಕ ಇತರರಿದ್ದರು. 
ಜಿಲ್ಲೆ

ಮನೆ ಹಂಚಿಕೆ ಅಕ್ರಮದ ತನಿಖೆ ಆಗಲಿ

ಮಸ್ಕಿ: ರಾಜ್ಯದಲ್ಲಿ ವಸತಿ ಯೋಜನೆಯ ಮನೆ ಹಂಚಿಕೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಕೂಡಲೇ ಸರ್ಕಾರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಶರಣಯ್ಯ ಸೊಪ್ಪಿಮಠ ಒತ್ತಾಯಿಸಿದರು.

ತಾಲೂಕಿನ ಸಂತೆಕೆಲ್ಲೂರು ಗ್ರಾಪಂ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿ, ಪಿಡಿಒ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದರು. ವಸತಿ ಯೋಜನೆ ಮನೆಗಳೆಲ್ಲ ಭ್ರಷ್ಟರ ಪಾಲಾಗಿದ್ದು, ಬಡವರು ಬೀದಿ ಪಾಲಾಗಿದ್ದಾರೆ.

ಮಸ್ಕಿ ಕ್ಷೇತ್ರದಲ್ಲಿ ಮೆದಕಿನಾಳ, ಹಾಲಾಪುರ, ತಲೇಖಾನ ಹಾಗೂ ಗೌಡನಬಾವಿ ಗ್ರಾಪಂಗಳಲ್ಲಿ ಮನೆ ಹಂಚಿಕೆಯಲ್ಲಿ ಆರೋಪಗಳಿದ್ದು, ಕೂಡಲೇ ಸರಿಪಡಿಸಬೇಕು. ಅರ್ಹರಿಗೆ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.