ಮಸ್ಕಿ ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಆಯ್ಕೆಯಾದ ವೀರೇಶ ಮತ್ತು ಪೂರ್ಣಿಮಾ ಪಾಟೀಲ್ ದಂಪತಿ ವಿಜಯದ ನಗೆ ಬೀರಿದರು. 
ಜಿಲ್ಲೆ

ನಿರ್ದೇಶಕರ ಸ್ಥಾನಕ್ಕೆ ಪತಿ-ಪತ್ನಿ ಆಯ್ಕೆ

ಮಸ್ಕಿ: ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನಿರ್ದೇಶಕರ 12ಸ್ಥಾನಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಪತಿ-ಪತ್ನಿ ಆಯ್ಕೆಯಾಗಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ವೀರೇಶ ಪಾಟೀಲ್ ಅವರ ಪತ್ನಿ ಪೂರ್ಣಿಮಾ ಪಾಟೀಲ್ ಜಯ ಸಾಧಿಸಿದ್ದಾರೆ.

ನೀಲಕಂಠಪ್ಪ ಗೋನಾಳ, ಲಿಂಗಪ್ಪ ಕುರುಬರ, ದುರ್ಗಪ್ಪ ಗೋನವಾರ, ದೇವಣ್ಣ ನಾಯಕ, ಮಲ್ಲಯ್ಯ, ವಿಜಯ ಲಕ್ಷ್ಮೀ ಹಿರೇಮಠ, ಮಲ್ಲಿಕಾರ್ಜುನ ಅಂಗಡಿ, ನಾಗಭೂಷಣ, ನಿರ್ಮಲಾ ದೊಡ್ಡಯ್ಯ ನಿರ್ದೇಶಕರ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಫಲಿತಾಂಶ ಪ್ರಕಟಗೊಂಡ ನಂತರ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಮಸ್ಕಿ ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಆಯ್ಕೆಯಾದ ವೀರೇಶ ಮತ್ತು ಪೂರ್ಣಿಮಾ ಪಾಟೀಲ್ ದಂಪತಿ ವಿಜಯದ ನಗೆ ಬೀರಿದರು.