ಮಸ್ಕಿ: ಎನ್.ಆರ್.ಬಿ.ಸಿ. ಕಾಲುವೆ ವ್ಯಾಪ್ತಿಯ 5 ಎ ನೀರಾವರಿ ಕಾಲುವೆ ಅನುಷ್ಠಾನ ಗೊಳಿಸಬೇಕು ಎಂದು ಒತ್ತಾಯಿಸಿ ನಾನಾ ಹಳ್ಳಿಗಳ ರೈತರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮಂಗಳವಾರದಿಂದ ಪತ್ರ ಚಳವಳಿ ಆರಂಭಿಸಿದರು.
ಕ್ಷೇತ್ರದ ರೈತರು, ಬಡವರು, ಸಾಮಾನ್ಯರು ಬಡತನ ನಿರುದ್ಯೋಗದಿಂದ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ದುಡಿಯುವ ಕೈ ಗಳಿಗೆ ಕೆಲಸ ಸಿಗದ ಕಾರಣ ಬೇರೆ ನಗರ ಪ್ರದೇಶಗಳಿಗೆ ಗುಳೆ ಹೋಗಬೇಕಾಗಿದೆ. 5 ಎ ಕಾಲುವೆ ಅನುಷ್ಠಾನಗೊಳಿಸಿದರೆ ಈ ಭಾಗದ ರೈತರ ಬದುಕು ಹಸನಾಗಲಿದೆ. ಕೂಡಲೇ ಸರ್ಕಾರ ಬೇಡಿಕೆ ಈಡೇರಿಸುವಂತೆ ರೈತರು ಪತ್ರ ಚಳವಳಿ ಶುರು ಮಾಡಿದ್ದಾರೆ.
ಕಾಲುವೆ ಅನುಷ್ಠಾನಕ್ಕೆ ಒತ್ತಾಯಿಸಿ ಪಾಮನ ಕೆಲ್ಲೂರ ಗ್ರಾಮ ಬಳಿ ರೈತರು ಕಳೆದ 30 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ರೈತರ ಸಂಕಷ್ಟ ಅರಿತು 5 ಎ ನೀರಾವರಿ ಕಾಲುವೆ ಯೋಜನೆ ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಬೇಕು ಎಂದು ಹೋರಾಟ ಸಮಿತಿ ಮುಖಂಡ ನಾಗರಡ್ಡೆಪ್ಪ ಬುದ್ದಿನ್ನಿ ಒತ್ತಾಯಿಸಿದರು.
ಮುಖಂಡರಾದ ಬಸವರಾಜ, ಮುದಕಪ್ಪ. ಮಲ್ಲನಗೌಡ, ಬಸವರಜಪ್ಪಗೌಡ ಹಾಗೂ ಇತರರು ಇದ್ದರು.