ಮಸ್ಕಿ: ಅಕ್ಕಮಹಾದೇವಿ ವಚನಕಾರರಲ್ಲಿ ಅಗ್ರಗಣ್ಯ. ಅವರ ವಚನಗಳನ್ನು ಅರಿತುಕೊಳ್ಳುವ ಮೂಲಕ ಹಿರಿಮೆ ಸಾಧಿಸಬಹುದು ಎಂದು ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಹೇಳಿದರು.
ಪಟ್ಟಣದ ಲಿಂಗಸುಗೂರು ರಸ್ತೆಯ ವೆಂಕಟಾಪುರ ಕ್ರಾಸ್ ಬಳಿ ಶಿವಶರಣೆ ಅಕ್ಕಮಹಾದೇವಿ ನಾಮಫಲಕವನ್ನು ಬುಧವಾರ ಅನಾವರಣಗೊಳಿಸಿ ಮಾತನಾಡಿದರು. ನಾಮಫಲಕ ಮತ್ತು ವೃತ್ತ ನಿರ್ಮಿಸುವುದು ಬಹುದಿನದ ಬೇಡಿಕೆಯಾಗಿತ್ತು. ಈಗ ಈಡೇರಿದೆ. ನಾಮಫಲಕಗಳನ್ನು ನೋಡಿದಾಗ ಶರಣರ ನೆನಪು ಬರಲಿದೆ ಎಂದರು.
ಬಣಜಿಗ ಸಮಾಜದ ತಾಲೂಕು ಅಧ್ಯಕ್ಷ ವೀರೇಶ ಸೌದ್ರಿ, ಪುರಸಭೆ ಸದಸ್ಯರಾದ ಮಲ್ಲಿಕಾರ್ಜುನ ಬ್ಯಾಳಿ, ಮಂಜುನಾಥ ನಂದಿಹಾಳ, ಶಿವಕುಮಾರ ಬ್ಯಾಳಿ, ಪ್ರಮುಖರಾದ ಎಂ.ಅಮರೇಶ, ಉಮಾಕಾಂತಪ್ಪ ಸಂಗನಾಳ, ಸುಗಣ್ಣ ಬಾಳೆಕಾಯಿ, ಬಸವಲಿಂಗ ಶಟ್ಟಿ, ಶರಣಪ್ಪ ಎಲಿಗಾರ, ಶಿವಪ್ರಸಾದ ಕಾಯಿ, ಅಮರೇಶ ಬ್ಯಾಳಿ, ಬಸವರಾಜ ಬೆಲ್ಲದ, ಉದಯಕುಮಾರ ಕೊಡಿಹಾಳ, ಬಸವರಾಜ ಗೋನಾಳ, ಮಲ್ಲೆಶಪ್ಪ ತೊರಣದಿಣ್ಣಿ, ವೀರೇಶ ತಾಳಿಕೋಟೆ, ಮಲ್ಲಿಕಾರ್ಜುನ ಯಂಬಲದ, ನೀಲಕಂಠಪ್ಪ ಗೋನಾಳ, ಶರಣಪ್ಪ ಹಂಪನಾಳ ಇತರರಿದ್ದರು.