ಜಿಲ್ಲೆ

ಪತ್ರಿಕಾ ಭವನ ಕಾಮಗಾರಿ ಶೀಘ್ರ ಪೂರ್ಣ; ಶಾಸಕ ಆರ್.ಬಸನಗೌಡ ತುರ್ವಿಹಾಳ ಭರವಸೆ

ಮಸ್ಕಿ: ಪಟ್ಟಣದಲ್ಲಿ ನಡೆಯುತ್ತಿರುವ ಪತ್ರಿಕಾ ಭವನದ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲು ಅಗತ್ಯ ನೆರವು ನೀಡುವುದಾಗಿ ಶಾಸಕ ಆರ್. ಬಸನಗೌಡ ತುರ್ವಿಹಾಳ ತಿಳಿಸಿದರು.

ಶನಿವಾರ ಭವನದ ಕಾಮಗಾರಿ ಪರಿಶೀಲನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಪತ್ರಿಕಾ ಭವನದ ಬಾಕಿ ಕಾಮಗಾರಿಗೆ ಶಾಸಕರ ಅನುದಾನಲ್ಲಿ 10 ಲಕ್ಷ ರೂ. ನೀಡಲಾಗಿದೆ. ಕಾಮಗಾರಿ ಬಹುತೇಕ ಮುಗಿಯುವ ಹಂತದಲ್ಲಿದ್ದು, ಇನ್ನೂ ಹಣದ ಕೊರತೆಯಾದರೆ ಒದಗಿಸುವ ಭರವಸೆ ನೀಡಿದರು.