ಮಸ್ಕಿ ತಾಲೂಕಿನ ಗುಡದೂರಿನಲ್ಲಿ ನರೇಗಾ ಕೂಲಿಕಾರರಿಗೆ ಟಿ ಶರ್ಟ್ ಮತ್ತು ಕ್ಯಾಪ್ ವಿತರಿಸಲಾಯಿತು.  
ಜಿಲ್ಲೆ

ಕಾರ್ಮಿಕರನ್ನು ಪ್ರೋತ್ಸಾಹಿಸಲು ಟಿ ಶರ್ಟ್ ವಿತರಣೆ

ಮಸ್ಕಿ: ಉದ್ಯೋಗ ಖಾತ್ರಿ ಕಾಮಗಾರಿಯಲ್ಲಿ 2020-21ನೇ ಸಾಲಿನಲ್ಲಿ 100 ದಿನ ಕೆಲಸ ಮಾಡಿದ ಕೂಲಿಕಾರರಿಗೆ ತಾಲೂಕಿನ ಗುಡದೂರು ಗ್ರಾಪಂ ಕಚೇರಿ ಆವರಣದಲ್ಲಿ ಟಿ ಶರ್ಟ್ ಮತ್ತು ಕ್ಯಾಪ್ ವಿತರಿಸಲಾಯಿತು.

ಪಿಡಿಒ ಮಲ್ಲಯ್ಯ ಮಾತನಾಡಿ, ನರೇಗಾ ಕೂಲಿಕಾರರನ್ನು ಪ್ರೋತ್ಸಾಹಿಸುವುದಕ್ಕಾಗಿ ಸರ್ಕಾರದಿಂದ ಟಿ ಶರ್ಟ್ ಮತ್ತು ಕ್ಯಾಪ್ ವಿತರಿಸಲಾಗುತ್ತಿದೆ. ನರೇಗಾದಿಂದ ಕೂಲಿಕಾರರು ಕೆಲಸ ಹುಡುಕಿಕೊಂಡು ಮಹಾನಗರಗಳಿಗೆ ಗುಳೆ ಹೋಗುವುದು ತಪ್ಪಿದೆ. ಅಳತೆ ಪ್ರಕಾರ ಕೆಲಸ ನಿರ್ವಹಿಸಿದಾಗ ಕಾರ್ಮಿಕರಿಗೆ ಸಂಪೂರ್ಣ ಕೂಲಿ ಪಾವತಿಯಾಗಲಿದೆ. ಕೆಲಸಕ್ಕೆ ಅರ್ಜಿ ಸಲ್ಲಿಸಿದರೆ, ನಿಯಮಗಳ ಪ್ರಕಾರ ಕೆಲಸ ನೀಡಲಾಗುವುದು ಎಂದರು.