ಪುರಸಭೆ ಮುಖ್ಯಾಧಿಕಾರಿ ವೆಂಕಟರಡ್ಡಿಗೆ ವಿಶ್ವಕರ್ಮ ಸಮುದಾಯದ ಪದಾಧಿಕಾರಿಗಳು ಮಂಗಳವಾರ ಮನವಿ ಸಲ್ಲಿಸಿದರು. ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಕಾಳಪ್ಪ ಕಣ್ಣೂರು, ವಿಜಯ ಬಡಿಗೇರ, ದೇವರಾಜ ಕಂಬಾರ, ಅಮರೇಶ ಪತ್ತಾರ ಚಿಲ್ಕರಾಗಿ, ಡಾ.ಶಿವಪ್ರಕಾಶ ಪತ್ತಾರ, ಮೌನೇಶ ಬಡಿಗೇರ ಜಂಬಲದಿನ್ನಿ, ಡಾ.ಸಂತೋಷ ಪತ್ತಾರ ಇತರರಿದ್ದರು.  
ಜಿಲ್ಲೆ

ಪುರಸಭೆ ರಸ್ತೆಗೆ ಕಾಳಿಕಾದೇವಿ ಹೆಸರಿಡಿ

ಮಸ್ಕಿ: ಪಟ್ಟಣದ ಶಾಸಕರ ಕಚೇರಿ ಮುಂಭಾಗದ ರಸ್ತೆಗೆ ಕಾಳಿಕಾದೇವಿ ಮಾರ್ಗವೆಂದು, ಪುರಸಭೆ ವಾಣಿಜ್ಯ ಮಳಿಗೆ ಹತ್ತಿರದ ವೃತ್ತಕ್ಕೆ ವಿಶ್ವಕರ್ಮ ವೃತ್ತವೆಂದು ನಾಮಕರಣ ಮಾಡಿ ಫಲಕ ಅಳವಡಿಸುವಂತೆ ಒತ್ತಾಯಿಸಿ ವಿಶ್ವಕರ್ಮ ಸಮುದಾಯ ಪದಾಧಿಕಾರಿಗಳು ಮುಖ್ಯಾಧಿಕಾರಿ ವೆಂಕಟರಡ್ಡಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಪಟ್ಟಣದ ವಿವಿಧ ವೃತ್ತ ಮತ್ತು ರಸ್ತೆಗಳಿಗೆ ಸಮಾಜ ಸುಧಾರಕರ ಹೆಸರುಗಳಿದ್ದು, ಕಾಳಿಕಾದೇವಿ ಮತ್ತು ವಿಶ್ವಕರ್ಮರ ಹೆಸರು ಯಾವ ವೃತ್ತಗಳಿಗೂ ನಾಮಕರಣಗೊಂಡಿಲ್ಲ. ಬ್ರಹ್ಮಾಂಡ ಸೃಷ್ಟಿಕರ್ತರಾದ ವಿಶ್ವಕರ್ಮರ ಹೆಸರಿನ ಫಲಕ ಹಾಕಲು ಪುರಸಭೆ ಅನುಮತಿಡಬೇಕು. ರಸ್ತೆಗೆ ಕಾಳಿಕಾದೇವಿ ಹೆಸರು ನಾಮಕರಣ ಮಾಡಬೇಕು ಎಂದು ಮನವಿ ಮಾಡಿದರು.

ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಕಾಳಪ್ಪ ಕಣ್ಣೂರು, ವಿಜಯ ಬಡಿಗೇರ, ದೇವರಾಜ ಕಂಬಾರ, ಅಮರೇಶ ಪತ್ತಾರ ಚಿಲ್ಕರಾಗಿ, ಡಾ.ಶಿವಪ್ರಕಾಶ ಪತ್ತಾರ, ಮೌನೇಶ ಬಡಿಗೇರ ಜಂಬಲದಿನ್ನಿ, ಡಾ.ಸಂತೋಷ ಪತ್ತಾರ, ಮಂಜುನಾಥ ಹಸಮಕಲ್, ಮಹೇಶ ಬುದ್ದಿನ್ನಿ ಇತರರಿದ್ದರು.