ಮಸ್ಕಿ: ಪಟ್ಟಣದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯ ಯಾರ್ಡ್‌ನಲ್ಲಿ ವ್ಯಾಪಾರ, ವಹಿವಾಟು ನಡೆಯುತ್ತಿಲ್ಲ. ವರ್ತಕರಲ್ಲದ ವ್ಯಕ್ತಿಗಳು ನಿವೇಶನಗಳನ್ನು ಪಡೆದುಕೊಂಡಿದ್ದಾರೆ. ಅಂತವರ ನಿವೇಶನಗಳನ್ನು ರದ್ದು ಪಡಿಸಬೇಕು ಎಂದು ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ಸಂತೋಷ ಹಿರೇದಿನ್ನಿ ಒತ್ತಾಯಿಸಿದರು.
ಪಟ್ಟಣದ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಸ್ಕಿಯ ಕೃಷಿ ಉತ್ಪನ್ನ ಮಾರುಕಟ್ಟೆಯ ಯಾರ್ಡ್‌ನಲ್ಲಿ ಕಳೆದ ಹಲವಾರು ವರ್ಷಗಳ ಹಿಂದೆ ವ್ಯಾಪಾರ ವಹಿವಾಟು ನಡೆಸುವುದಾಗಿ ಹೇಳಿ ಸರ್ಕಾರದಿಂದ ಫ್ಲಾಟ್‌ಗಳನ್ನು ಪಡೆದುಕೊಂಡಿದ್ದಾರೆ. ಕೆಲವೊಂದು ವರ್ತಕರು ಈವರೆಗೆ ಕಟ್ಟಡಗಳನ್ನು ಕಟ್ಟಿಕೊಳ್ಳದೆ ನಿವೇಶನಗಳನ್ನು ಖಾಲಿ ಬಿಟ್ಟಿದ್ದಾರೆ. ಇದರಿಂದ ಎಪಿಎಂಸಿಯ ಆದಾಯಕ್ಕೆ ಹೊಡೆತ ಬೀಳುತ್ತಿದೆ. ವರ್ತಕರು ನಿವೇಶನ ಪಡೆದು ರೈತರ ಹೆಸರಿನಲ್ಲಿ ಸರ್ಕಾರಕ್ಕೆ ದ್ರೋಹ ಮಾಡಲಾಗುತ್ತಿದೆ. ಕ್ರಮ ಕೈಗೊಳ್ಳದಿದ್ದರೆ ಲಿಂಗಸುಗೂರು ಎಪಿಎಂಸಿ ಕಚೇರಿ ಬಳಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರಮುಖರಾದ ಮಾರುತಿ ಜಿನ್ನಾಪೂರ, ವೆಂಕಟೇಶ ನಾಯಕ ಚಿಲ್ಕಾರಾಗಿ, ಅಮರೇಶ ಹಿರೇದಿನ್ನಿ, ತಿರುಪತಿ ಮಸ್ಕಿ ಇದ್ದರು.