ಗೋನಾಳ ಗ್ರಾಮದಲ್ಲಿ ಸದ್ಗುರು ನಿರುಪಾಧೀಶ್ವರ ಪುರಾಣ ಮಂಗಲೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಅಂಕಲಿಮಠದ ಫಕೀರೇಶ್ವರ ಸ್ವಾಮೀಜಿ, ಹಿರೇಮಠ ತುರ್ವಿಹಾಳದ ಅಮರಗುಂಡ ಶಿವಾಚಾರ್ಯರು ಪುರವರ ಇತರರಿದ್ದರು. 
ಜಿಲ್ಲೆ

ಎಲ್ಲರೂ ಧರ್ಮ ನಿಷ್ಠರಾಗಿ ಸೇವೆ ಸಲ್ಲಿಸಲಿ

ಮಸ್ಕಿ: ತಾಲೂಕಿನ ಗೋನಾಳ ಗ್ರಾಮದಲ್ಲಿ ಮಾತೋಶ್ರೀ ಗಂಗಮ್ಮ ಅಮ್ಮನವರ 27ನೇ ಪುಣ್ಯತಿಥಿ ಅಂಗವಾಗಿ ಆಯೋಜಿಸಿದ್ದ ಸದ್ಗುರು ನಿರುಪಾಧೀಶ್ವರ ಪುರಾಣ ಮಂಗಲೋತ್ಸವ ಗುರುವಾರ ಸಂಪನ್ನಗೊಂಡಿತು.

ಅಂಕಲಿಮಠದ ಪಕೀರೇಶ್ವರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಕ್ತರು ಧರ್ಮ ನಿಷ್ಠರಾಗಿ ಭಕ್ತಿ ಭಾವದಿಂದ ನಡೆದುಕೊಳ್ಳಬೇಕು. ಸಂಸ್ಕಾರವನ್ನು ಬೆಳಸಿಕೊಳ್ಳಬೇಕು. ಗುರು ಹಿರಿಯರಿಗೆ ಗೌರವ ಕೊಡುವುದು ನಮ್ಮ ಸಂಸ್ಕಾರವಾಗಿದ್ದು ಎಲ್ಲರೂ ಪಾಲಿಸುವಂತೆ ಆಶೀರ್ವಚನ ನೀಡಿದರು.

ಜು.25 ರಿಂದ ಆ.14 ರವರೆಗೆ ವೇ.ಮೂ.ಮಲ್ಲಯ್ಯ ಶಾಸ್ತ್ರೀಗಳು ಹಿರೇಮಠ ಪುರಾಣ ಪ್ರವಚನ ನಡೆಸಿದರು. ಪಾಪಣ್ಣ ಮಾಸ್ತಾರ ಮುದಗಲ್, ಜಂಬಣ್ಣ ಹಸಮಕಲ್ ಅವರು ಸಂಗೀತ ಸೇವೆ ಸಲ್ಲಿಸಿದರು. ತುರ್ವಿಹಾಳದ ಪುರವರ ಹಿರೇಮಠ ಅಮರಗುಂಡ ಶಿವಾಚಾರ್ಯರು ಇತರರಿದ್ದರು.