ಮಸ್ಕಿಯಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಜನ್ಮದಿನ ಆಚರಣೆ ಕಾರ್ಯಕ್ರಮವನ್ನು ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದೆ ಹಸಮಕಲ್ ಶಾಂತಮ್ಮ ಜಂಬಣ್ಣ ಉದ್ಘಾಟಿಸಿದರು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಪ್ರಮುಖರಾದ ಮಹಾದೇವಪ್ಪಗೌಡ ಪೊಪಾ, ಅಪ್ಪಾಜಿಗೌಡ ಪಾಟೀಲ್, ಸಿದ್ದಣ್ಣ ಹೂವಿನಬಾವಿ, ಮಲ್ಲಯ್ಯ ಅಂಬಾಡಿ, ಪ್ರಸನ್ನ ಪಾಟೀಲ್ ಇತರರಿದ್ದರು. 
ಜಿಲ್ಲೆ

ಜನರ ಪ್ರೀತಿ-ವಿಶ್ವಾಸಕ್ಕೆ ಚಿರಋಣಿ

ಶಾಮಸುಂದರ್ ಕೊಪ್ಪಳಕರ್

ಮಸ್ಕಿ: ಮೂರು ಬಾರಿ ಶಾಸಕನಾಗಿ ಕ್ಷೇತ್ರ ಅಭಿವೃದ್ಧಿ ಮಾಡುವ ಅವಕಾಶ ಕಲ್ಪಿಸಿದ ಜನರನ್ನು ನಾನೆಂದೂ ಮರೆಯುವುದಿಲ್ಲ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪ್ರತಾಪಗೌಡ ಪಾಟೀಲ್ ಅಭಿಮಾನಿಗಳಿಂದ ಏರ್ಪಡಿಸಿದ್ದ ಪ್ರತಾಪಗೌಡರ 71ನೇ ವರ್ಷದ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಧಿಕಾರ ಇದ್ದಾಗ ತೋರಿಸುವ ಅಭಿಮಾನ, ಪ್ರೀತಿಗಿಂತ ಅಧಿಕಾರ ಇಲ್ಲದಿದ್ದಾಗಲೂ ಕ್ಷೇತ್ರದ ಜನ ಪ್ರೀತಿ ತೋರಿಸಿದ್ದಾರೆ. ಜನರ ವಿಶ್ವಾಸಕ್ಕೆ ನಾನು ಚಿರಋಣಿ ಎಂದು ಪ್ರತಾಪಗೌಡ ಪಾಟೀಲ್ ಗದ್ಗದಿತರಾದರು. ಪ್ರತಾಪಗೌಡ ಪಾಟೀಲ್ ಫೌಂಡೇಷನ್‌ನಿಂದ ಜಾನಪದ ಕಲಾವಿದೆ ಹಸಮಕಲ್ ಶಾಂತಮ್ಮ ಜಂಬಣ್ಣ ಅವರನ್ನು ಸನ್ಮಾನಿಸಲಾಯಿತು.

ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಜಿಪಂ ಮಾಜಿ ಸದಸ್ಯ ಮಹಾದೇವಪ್ಪಗೌಡ ಪೊಪಾ, ಬಸವಂತರಾಯ ಕುರಿ, ಅಪ್ಪಾಜಿಗೌಡ ಪಾಟೀಲ್, ಸಿದ್ದಣ್ಣ ಹೂವಿನಬಾವಿ, ಮಲ್ಲಪ್ಪ ಅಂಕುಶದೊಡ್ಡಿ, ಡಾ.ಬಿ.ಎಚ್.ದಿವಟರ್, ರವಿಗೌಡ ಪಾಟೀಲ್, ಯಂಕಣ್ಣ ಕಮತರ್, ಶಂಕರರಾವ್ ಕುಲಕರ್ಣಿ, ಪ್ರಸನ್ನ ಪಾಟೀಲ್, ಚೇತನ್ ಪಾಟೀಲ್, ಶರಣಯ್ಯ ಸೊಪ್ಪಿಮಠ, ಮೌನೇಶ ನಾಯಕ ಇತರರಿದ್ದರು.