ಮಸ್ಕಿಯ ದೇವನಾಂಪ್ರಿಯ ಅಶೋಕ ಸರ್ಕಾರಿ ಪದವಿ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಮತ ಯಂತ್ರಗಳ ಪ್ರಾತ್ಯಕ್ಷಿಕೆ ಕಾರ್ಯಾಗಾರದಲ್ಲಿ ತಹಸೀಲ್ದಾರ್ ಕವಿತಾ ಆರ್. ಮಾತನಾಡಿದರು.  
ಜಿಲ್ಲೆ

ಚುನಾವಣಾ ಆಯೋಗದೊಂದಿಗೆ ಸಹಕರಿಸಲು ರಾಯಕೀಯ ಪಕ್ಷಗಳು, ಅಭ್ಯರ್ಥಿಗಳಿಗೆ ತಹಸೀಲ್ದಾರ್ ಕವಿತಾ ಆರ್. ಮನವಿ

ಮಸ್ಕಿ: ಸ್ಥಳೀಯ ಸಂಸ್ಥೆಗಳ ಚುನಾವಣೆ ಡಿ. 27 ರಂದು ನಡೆಯಲಿದ್ದು, ಮತದಾನದ ವೇಳೆ ಶಾಂತಿ-ಸುವ್ಯವಸ್ಥೆ ಕಾಪಾಡಲು ಎಲ್ಲರೂ ಚುನಾವಣೆ ಆಯೋಗದೊಂದಿಗೆ ಸಹಕರಿಸಬೇಕು ಎಂದು ತಹಸೀಲ್ದಾರ್ ಕವಿತಾ ಆರ್. ಮನವಿ ಮಾಡಿದರು.

ಪಟ್ಟಣದ ದೇವನಾಂಪ್ರಿಯ ಅಶೋಕ ಸರ್ಕಾರಿ ಪದವಿ ಕಾಲೇಜಿನಲ್ಲಿ ಗುರುವಾರ ಅಭ್ಯರ್ಥಿಗಳಿಗಾಗಿ ಏರ್ಪಡಿಸಿದ್ದ ಮತಯಂತ್ರದ ಪ್ರಾತಕ್ಷತೆ ಕಾರ್ಯಾಗಾರದಲ್ಲಿ ಮಾತನಾಡಿದರು. ಚುನಾವಣೆ ಆಯೋಗದ ನಿಯಮದಂತೆ ಕಟ್ಟು ನಿಟ್ಟಾಗಿ ಎಲೆಕ್ಷನ್ ನಡೆಸಲಾಗುವುದು. ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಮತ ಯಂತ್ರದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದರೆ ಕಚೇರಿಯ ಸಮಯದಲ್ಲಿ ಸಂಬಂಧ ಪಟ್ಟ ಚುನಾವಣಾಧಿಕಾರಿಗಳ ಕಚೇರಿಗೆ ಬಂದು ಪಡೆಯಬಹುದು ಎಂದರು.