ಬಿಜೆಪಿ ಮಂಡಲ ಪದಾಧಿಕಾರಿಗಳ ಪಟ್ಟಿ ಬಿಡುಗಡೆ
ಮಸ್ಕಿ: ಮುಂದಿನ ಎರಡು ಮೂರು ತಿಂಗಳಲ್ಲಿ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುವ ಸಂಭವ ಇದ್ದು, ಬಿಜೆಪಿ ಕಾರ್ಯಕರ್ತರು ಈಗಿನಿಂದಲೇ ಚುನಾವಣೆಗೆ ಸನ್ನದ್ಧರಾಗುವಂತೆ ಅನರ್ಹಗೊಂಡ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.
ಪಟ್ಟಣದ ಬಸವೇಶ್ವರ ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ಮಂಡಲ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ತಿಂಗಳ ಕೊನೆಯಲ್ಲಿ ಕೋರ್ಟ್‌ನಿಂದ ತೀರ್ಪು ಬರುವ ನಿರೀಕ್ಷೆ ಇದೆ. ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿ ಬಿಜೆಪಿ ಗೆಲುವಿಗೆ ಶ್ರಮಿಸಬೇಕು ಎಂದರು.
ಮಸ್ಕಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ, ಬಿಜೆಪಿಯ ಹಿರಿಯ ಮುಖಂಡ ಮಹಾದೇವಪ್ಪ ಗೌಡ ಪಾಟೀಲ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅಪ್ಪಾಜಿಗೌಡ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಾಣೇಶ ದೇಶಪಾಂಡೆ, ಶರಣಪ್ಪಗೌಡ ನಕ್ಕುಂದಿ, ಶರಣಬಸವ ವಕೀಲ ಇದ್ದರು.
ನೂತನ ಪದಾಧಿಕಾರಿಗಳು
ಶಿವಪುತ್ರಪ್ಪ ಅರಳಹಳ್ಳಿ (ಮಂಡಲ ಅಧ್ಯಕ್ಷ), ವೆಂಕನಗೌಡ ಹಡಗಲಿ, ಶರಣಮ್ಮ ಇರಕಲ್, ಗವಿಸಿದ್ದಪ್ಪ ಸಂತೆಕೆಲ್ಲೂರು, ದುರುಗೇಶ ತುರ್ವಿಹಾಳ, ಪದ್ಮಾವತಿ ಅಮರೇಶ ಬಳಗಾನೂರು, ನಾಗರತ್ನ ಚಂದ್ರಶೇಖರ ತಿಡಿಗೋಳ (ಉಪಾಧ್ಯಕ್ಷರು), ಮಲ್ಲಿಕಾರ್ಜುನ ಯಾದವ್, ಶರಣಬಸವ ಸೊಪ್ಪಿಮಠ (ಪ್ರಧಾನ ಕಾರ್ಯದರ್ಶಿ), ಶಿವಾನಂದ ರಾಠೋಡ, ಮಲ್ಲಿಕಾರ್ಜುನ, ಸೋಮಶೇಖರ, ರಮೇಶ, ವಿಜಯಲಕ್ಷ್ಮೀ ಬಸನಗೌಡ, ನಾಗವೇಣಿ ಸುರೇಶ (ಕಾರ್ಯದರ್ಶಿಗಳು), ಕಿರಣಕುಮಾರ (ಕೋಶಾಧ್ಯಕ್ಷ) ಮಲ್ಲಿಕಾರ್ಜುನ (ಕಚೇರಿ ಕಾರ್ಯದರ್ಶಿ) ಆಯ್ಕೆಯಾಗಿದ್ದಾರೆ.