ಜಿಲ್ಲೆ

ಮೋದಿ ಮಾತಿಗೆ ಮರುಳಾಗದಿರಿ; ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ನಾಯಕ ಹೇಳಿಕೆ

ಮಸ್ಕಿ: ಜನರನ್ನು ಯಾಮಾರಿಸುವ ಪ್ರಧಾನಿ ನರೇಂದ್ರ ಮೋದಿ ಮಾತುಗಳಿಗೆ ಬೆಲೆ ಕೊಡಬೇಡಿ. ದೇಶದ ಸ್ವಾತಂತ್ರೃಕ್ಕೆ ಬಿಜೆಪಿ ಕೊಡುಗೆ ಶೂನ್ಯವಾಗಿದ್ದು, ಕಾಂಗ್ರೆಸ್ ನೇತಾರರಿಂದ ಭಾರತ ಸ್ವಾತಂತ್ರ್ಯಗೊಂಡಿದೆ ಎಂದು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಬಿ.ವಿ.ನಾಯಕ ಹೇಳಿದರು.

ಹೊಗರನಾಳ ಗ್ರಾಮದಲ್ಲಿ ಬ್ಲಾಕ್ ಕಾಂಗ್ರೆಸ್‌ನಿಂದ ಶನಿವಾರ ಆಯೋಜಿಸಿದ್ದ ಸ್ವಾತಂತ್ರೃದ ಅಮೃತಮಹೋತ್ಸವ ಅಂಗವಾಗಿ ನಡೆದ ಪಾದಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಬಿಜೆಪಿಯವರು ಜನರನ್ನು ಮರಳು ಮಾಡುವ ಕಪಟ ನಾಟಕ ಮಾಡುತ್ತಾರೆ. ಭಾವನೆಗಳೊಂದಿಗೆ ಚೆಲ್ಲಾಟವಾಡುವ ಬಿಜೆಪಿಯವರು ಜನರ ನಡುವೆ ಕಂದಕ ಸೃಷ್ಟಿಸಿ ತಾರತಮ್ಯ ಮಾಡುವ ಮೂಲಕ ವಂಚಿಸುತ್ತಿದ್ದಾರೆ ಎಂದು ಟೀಕಿಸಿದರು.

ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಪ್ರಧಾನಿ ಮೋದಿ 8 ವರ್ಷದ ಆಡಳಿತದಲ್ಲಿ ಶ್ರೀಮಂತರ 10 ಲಕ್ಷ ಕೋಟಿ ರೂ. ಸಾಲ ಮಾನ್ನ ಮಾಡಿ ಬಿಜೆಪಿ ಧನಿಕರ ಪರವಾದ ಪಕ್ಷ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದರು. ಶಾಸಕ ಆರ್.ಬಸನಗೌಡ ತುರ್ವಿಹಾಳ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎ.ವಸಂತ ಕುಮಾರ, ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ, ಗ್ರಾಮೀಣ ಬ್ಲಾಕ್ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ, ಪ್ರಮುಖರಾದ ಮಲ್ಲನಗೌಡ ಗುಂಡಾ, ಸೋಮಶೇಖರ ಬಸಾಪುರ, ಅಮರೇಶ ಹೊಸಮನಿ, ರುದ್ರಗೌಡ ಬಜೆಗೌಡ, ಚಂದ್ರಶೇಖರ ಬಳಗಾನೂರು, ಕೃಷ್ಣ ಚಿಗರಿ, ಆದನಗೌಡ ಸಂತೆಕೆಲ್ಲೂರು, ಚಾಂದ್ ಶೇಡ್ಮಿ, ಆನಂದ ವೀರಾಪುರ ಇತರರಿದ್ದರು.