ಮಸ್ಕಿ: ಇಲ್ಲಿನ ಭ್ರಮರಾಂಬ ದೇವಸ್ಥಾನ ಪ್ರಾರಂಭವಾಗಿ 54 ವರ್ಷಗಳ ನಂತರ ಮೊದಲ ಬಾರಿಗೆ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ದೇವಸ್ಥಾನ ಚಾರಿಟಬಲ್ ಟ್ರಸ್ಟ್ ರಚಿಸಲಾಗಿದೆ ಎಂದು ನೂತನ ಅಧ್ಯಕ್ಷ ಪ್ರತಾಪಗೌಡ ಪಾಟೀಲ್ ಹೇಳಿದರು.
ದೇವಸ್ಥಾನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇವಸ್ಥಾನದ ಅಭಿವೃದ್ಧಿ ಜತೆಗೆ ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆ ನಡೆಸಲಾಗುವುದು ಎಂದರು. ನಂತರ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದರು.
ವರರುದ್ರಮುನಿ ಶಿವಾಚಾರ್ಯರು (ಗೌರವ ಅಧ್ಯಕ್ಷ), ಪ್ರತಾಪಗೌಡ ಪಾಟೀಲ್ (ಅಧ್ಯಕ್ಷ), ವೀರಭದ್ರ ಗೌಡ (ಅಪ್ಪಾಜಿಗೌಡ), ಡಾ.ಶಿವಶರಣಪ್ಪ ಇತ್ಲಿ, ಬಸನಗೌಡ ಪೊಲೀಸ್ ಪಾಟೀಲ್ (ಉಪಾಧ್ಯಕ್ಷರು), ಸಿದ್ದಣ್ಣ ಮುಳ್ಳೂರು (ಪ್ರಧಾನ ಕಾರ್ಯದರ್ಶಿ), ನಾಗರಾಜ ಸಜ್ಜನ (ಸಹ ಕಾರ್ಯದರ್ಶಿ), ಡಾ.ಬಸವಲಿಂಗಪ್ಪ ದಿವಟರ್ (ಖಜಾಂಚಿ), ಪಂಪಣ್ಣ ಗುಂಡಳ್ಳಿ, ಪ್ರಕಾಶ ಧಾರಿವಾಲ್, ಸಿದ್ದಲಿಂಗಯ್ಯ ಗಚ್ಚಿನಮಠ, ಮಲ್ಲಿಕಾರ್ಜುನ ಕ್ಯಾತ್ನಟ್ಟಿ, ಆಶಾ ಕ್ಯಾತ್ನಟ್ಟಿ ಅವರು ಸದಸ್ಯರಾಗಿ ನೇಮಕಗೊಂಡಿದ್ದಾರೆ.