ಮಸ್ಕಿ: ಕಲ್ಯಾಣ ಕರ್ನಾಟಕದಲ್ಲಿ ವಾಸವಿರುವ ಜಂಗಮರು ಮೂಲತ ಭಿಕ್ಷಾವೃತ್ತಿ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ತಹಸಿಲ್ ಕಚೇರಿ ಮುಂದೆ ಹೈ.ಕ. ಬೇಡಜಂಗಮ ಸಮಾಜದ ಸಂಸ್ಥೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ತಾಲೂಕು ಘಟಕದ ಅಧ್ಯಕ್ಷ ಶಿವಕುಮಾರ ಹಿರೇಮಠ ಮಾತನಾಡಿ, ಸಮುದಾಯದವರು 1921 ರಲ್ಲಿ ದುರ್ಬಲ ವರ್ಗದ ಪಟ್ಟಿಯಲ್ಲಿದ್ದರು. 1935 ರಲ್ಲಿ ಭಾರತ ಸರ್ಕಾರ ಪರಿಶಿಷ್ಟ ಜಾತಿಯೆಂದು ಉಪಭಂದಿಸಿದೆ. ಅಲ್ಲದೆ ಜಂಗಮರು ಹಿಂದಿನಿಂದಲೂ ಧಾರ್ಮಿಕ ಭಿಕ್ಷಾ ವೃತ್ತಿ ಮಾಡುತ್ತಿದ್ದು, ಹೈದರಾಬಾದ್ ರಾಜ್ಯ 1950ರಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಿತ್ತು. ಅದರಂತೆ ಹೈದರಾಬಾದ್ ನಿಜಾಂ ಸರ್ಕಾರದ ಅಧೀನದಲ್ಲಿದ್ದ ಹೈ.ಕ. ಪ್ರದೇಶದ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೊಡುವಂತೆ ಒತ್ತಾಯಿಸಿದರು.
ನಂತರ ತಹಸೀಲ್ದಾರ್ ಬಲರಾಮ ಕಟ್ಟಿಮನಿಗೆ ಮನವಿ ಸಲ್ಲಿಸಿದರು. ಸಂಘದ ಬಸವರಾಜಸ್ವಾಮಿ ಹಸಮಕಲ್, ಶಶಿಧರ ಹಂಚಿನಾಳ, ಅಕ್ಷಯಕುಮಾರ, ವಿನೋದಕುಮಾರ, ನವೀನ್,ಎಚ್.ಎಂ. ಗಂಗಾಧರ.ಕೆ. ಮನೋಜಕುಮಾರ ಇದ್ದರು.