ಜಿಲ್ಲೆ

ಮಸ್ಕಿಗೆ ಬಂದ ಮತಯಂತ್ರಗಳು

ಶಾಮಸುಂದರ್ ಕೊಪ್ಪಳಕರ್

ಮಸ್ಕಿ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಆರ್.ದೇವಿಕಾ ನೇತೃತ್ವದಲ್ಲಿ ಪೊಲೀಸ್ ಭದ್ರತೆಯೊಂದಿಗೆ ರಾಯಚೂರಿನಿಂದ ಗುರುವಾರ ಸಂಜೆ ಮತಯಂತ್ರಗಳನ್ನು ತೆಗೆದುಕೊಂಡು ಬಂದು ಪಟ್ಟಣದ ದೇವನಾಂಪ್ರಿಯ ಕಾಲೇಜಿನಲ್ಲಿ ಇರಿಸಲಾಗಿದೆ.

ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಬೇಕಾಗುವ ಇವಿಎಂ, ವಿವಿಪ್ಯಾಟ್‌ಗಳನ್ನು ತರಲಾಗಿದ್ದು, ಸ್ಟ್ರಾಂಗ್ ರೂಮ್‌ಗೆ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ತಹಸೀಲ್ದಾರ್ ಸುಧಾ ಅರಮನೆ, ಅರುಣ್ ರಾಠೋಡ್ ಇತರರಿದ್ದರು.