ಮಸ್ಕಿಯಲ್ಲಿ ಆರ್ಯವೈಶ್ಯ ಸಮಾಜದಿಂದ ಕನ್ಯಕಾಪರಮೇಶ್ವರಿ ಭಾವಚಿತ್ರದ ಮೆರವಣಿಗೆ ನಡೆಯಿತು. ಮಹಿಳಾ ಘಟಕದ ತಾಲೂಕಾಧ್ಯಕ್ಷೆ ಲಲಿತಾ ಸಿಂಧನೂರು, ಶಶಿಕಲಾ ಇಲ್ಲೂರ, ವೀಣಾ ಶೆಟ್ಟಿ ಇತರರಿದ್ದರು.  
ಜಿಲ್ಲೆ

ಕನ್ಯಕಾಪರಮೇಶ್ವರಿ ಭಾವಚಿತ್ರ ಮೆರವಣಿಗೆ

ಮಸ್ಕಿ: ಪಟ್ಟಣದಲ್ಲಿ ಆರ್ಯವೈಶ್ಯ ಸಮುದಾಯದ ಕುಲದೇವತೆ ವಾಸವಿ ಜಯಂತಿ ಅಂಗವಾಗಿ ಕನ್ಯಕಾಪರಮೇಶ್ವರಿ ಭಾವಚಿತ್ರದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಶನಿವಾರ ನಡೆಯಿತು.

ಪಟ್ಟಣದ ಆಂಜನೇಯ ದೇವಸ್ಥಾನದ ಹತ್ತಿರದ ಗಂಗಾಸ್ಥಳದಿಂದ ಮಹಿಳೆಯರು ಕುಂಭದೊಂದಿಗೆ ಅಲಂಕೃತ ವಾಹನದಲ್ಲಿ ಕನ್ಯಕಾಪರಮೇಶ್ವರಿ ಭಾವಚಿತ್ರದ ಮೆರವಣಿಗೆ ಅಶೋಕ ವೃತ್ತ, ಅಗಸಿ, ಮುಖ್ಯಬಜಾರ, ದೈವದಕಟ್ಟೆಯ ಮೂಲಕ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ ತಲುಪಿತು. ದೇವಸ್ಥಾನದಲ್ಲಿ ವಿಶೇಷ ಪೂಜಾ ಹಾಗೂ ತೊಟ್ಟಿಲು ಸೇವಾ ಕಾರ್ಯಕ್ರಮ ಜರುಗಿದವು. ನಂತರ ಸಂಜೆ ದೇವಸ್ಥಾನದಲ್ಲಿ ಮಕ್ಕಳಿಂದ ಭಕ್ತಿಗೀತೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಸಮುದಾಯದ ಮುಖಂಡರಾದ ಶ್ರೀನಿವಾಸ ಇಲ್ಲೂರ, ಲಕ್ಷ್ಮೀಪತಿ ಇಲ್ಲೂರ, ಪಿ.ಉಮಾಪತಿ ಶೆಟ್ಟಿ, ಪ್ರಾಣೇಶ ಅಮರಾವತಿ, ಸತ್ಯನಾರಾಯಣ ಇಲ್ಲೂರ, ಗುರುರಾಜ, ಮಹಿಳಾ ಘಟಕದ ತಾಲೂಕಾಧ್ಯಕ್ಷೆ ಲಲಿತಾ ಸಿಂಧನೂರು, ಶಶಿಕಲಾ ಇಲ್ಲೂರ, ವೀಣಾ ಶೆಟ್ಟಿ ಇತರರಿದ್ದರು.
ಪದಾಧಿಕಾರಿಗಳ ಆಯ್ಕೆ: ಮಸ್ಕಿ ತಾಲೂಕು ಆರ್ಯವೈಶ್ಯ ಸಮಾಜದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಲಕ್ಷ್ಮೀನಾರಾಯಣ ಶೆಟ್ಟಿ (ಗೌರವಾಧ್ಯಕ್ಷ), ಮಲ್ಲಯ್ಯ ಶೆಟ್ಟಿ (ಅಧ್ಯಕ್ಷ), ರಾಮಕೃಷ್ಣ ಇಲ್ಲೂರು (ಉಪಾಧ್ಯಕ್ಷ), ಡಾ.ಮಲ್ಲಿಕಾರ್ಜುನ (ಕಾರ್ಯದರ್ಶಿ), ನಾಗರಾಜ ಇಲ್ಲೂರು (ಸಹ ಕಾರ್ಯದರ್ಶಿ