ಉಡುಪಿ: ಹೂಡೆ ಮುಆವಿಯಾ ಮಸೀದಿಯಲ್ಲಿ ಆಡಳಿತ ಮಂಡಳಿ ಅನುಮತಿ ಇಲ್ಲದೆ 10-15 ವರ್ಷದ ಕೆಳಗಿನ ಮಕ್ಕಳಿಗೆ ಕುರಾನ್ ಕಲಿಸುವುದು ಬೇಡವೆಂದ ಮಸೀದಿ ಅಧ್ಯಕ್ಷರ ಮೇಲೆ ಸ್ಥಳೀಯ ಮುಸ್ಲಿಂ ಸಹೋದರರಿಬ್ಬರು ಹಲ್ಲೆ ನಡೆಸಿ, ಜೀವಬೆದರಿಕೆ ಒಡ್ಡಿದ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೂಡೆಯ ಮುಆವಿಯಾ ಮಸೀದಿಯ ಅಧ್ಯಕ್ಷ ಕುದುರ್ ಸೈಪುಲ್ಲಾ ಹಲ್ಲೆಗೊಳಗಾದವರು. ಹೂಡೆಯ ಜದೀದ ಮಸೀದಿ ಬಳಿಯ ನಿವಾಸಿ ಪೈಜಲ್ ಸುಲೇಮಾನ್ ಎಂಬಾತ ಮುಆಮಿಯಾ ಮಸೀದಿಯ ಬಳಿ ಖಾಸಗಿ ಜಾಗದಲ್ಲಿ ಶೆಡ್ ಕಟ್ಟಿಕೊಂಡು ಸಣ್ಣ ಮಕ್ಕಳಿಗೆ ಕುರಾನ್ ಬೋಧನೆ ಮಾಡುತ್ತಿದ್ದ. ನಂತರ ಮಸೀದಿಯಲ್ಲಿ ಬೋಧನೆ ಶುರು ಮಾಡಿದ್ದು, ಇದಕ್ಕೆ ಕುದುರ್ ಸೈಫುಲ್ಲಾ ಆಕ್ಷೇಪವ್ಯಕ್ತಪಡಿಸಿದ್ದರು. ಮಂಗಳವಾರ ಬೆಳಗ್ಗೆ ಮಸೀದಿಗೆ ಪ್ರಾರ್ಥನೆಗೆ ತೆರಳಿದ್ದ ಸಂದರ್ಭದಲ್ಲಿ ಇದೇ ವಿಚಾರದಲ್ಲಿ ಪೈಜಲ್ ಸುಲೇಮಾನ್ ಹಾಗೂ ಫಾರೂಕ್ ಸುಲೇಮಾನ್ ವಾಗ್ವಾದಕ್ಕೆ ಇಳಿದಿದ್ದು, ಕುದುರ್ ಸೈಫುಲ್ಲಾ ಅವರ ಕೆನ್ನೆಗೆ ಹೊಡೆದು ಜೀವಬೆದರಿಕೆ ಒಡ್ಡಿದ್ದಾರೆ.