ಜಿಲ್ಲೆ

Maruti Jatra 3.5 ಲಕ್ಷ ರೂ.ಗೆ ಹರಾಜಾದ ಪ್ರಸಾದದ ಬಟ್ಟಲು

Uttara Kannada - Subash Hegde

ಕಾರವಾರ/Maruti Jatra : ಮಾರುತಿ ದೇವರ ಜಾತ್ರೆಯ ಪ್ರಸಾದದ ಬಟ್ಟಲು 3.5 ಲಕ್ಷ ರೂ.ಗೆ ಹರಾಜಾಗಿದೆ.

ಶನಿವಾರ ಮಾರುತಿ ದೇವರ ಜಾತ್ರೆ ಆಯೋಜನೆಯಾಗಿತ್ತು. ನೂರಾರು ರಂಗೋಲಿಗಳ ಪ್ರದರ್ಶನ, ಪಲ್ಲಕ್ಕಿ ಉತ್ಸವ, ಪೂಜೆಗಳು ಗಮನ ಸೆಳೆದವು. ಭಾನುವಾರ ದಹಿಂಕಾಲ ಉತ್ಸವ ಕುಡಕೆ ಒಡೆಯುವ ಪದ್ಧತಿ ನಡೆಯಿತು. ಭಾನುವಾರ ಜಾತ್ರೆಗೆ ಹರಕೆ ಸ್ವರೂಪದಲ್ಲಿ ಬಂದ ವಸ್ತುಗಳ ಹರಾಜು ಪ್ರಕ್ರಿಯೆ ನಡೆಯಿತು. ಫಲಾವಳಿಗಳ ನಂತರ ಕೊನೆಯಲ್ಲಿ ದೇವರ ಪ್ರಸಾದದ ಬಟ್ಟಲನ್ನು ಹರಾಜು ಹಾಕಲಾಯಿತು.

ಗೋವಾ ಮೂಲದ ಹಾಲಿ ದುಬೈನಲ್ಲಿ ಉದ್ಯೋಗದಲ್ಲಿರುವ ಅನಮೋಲ್‌ ಬಾಂದೇಕರ್‌ ಎಂಬುವವರು ಪ್ರಸಾದದ ಬಟ್ಟಲನ್ನು 3.5  ಲಕ್ಷ ರೂ.ಗೆ ಪಡೆದುಕೊಂಡರು. ಅನಮೋಲ್‌ ಅವರ ತಾಯಿ ಕಾರವಾರದ ಮಾರುತಿ ಗಲ್ಲಿಯವರಾಗಿದ್ದರು.

ಮಾರುತಿ ದೇವಸ್ಥಾನದ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಗೆ ಪ್ರಸಾದದ ತಾಟು ಹರಾಜಾಗಿದೆ. ಕಾರವಾರ ಮಾರುತಿ ಗಲ್ಲಿ ಮೂಲದವರು ದೇಶ, ವಿದೇಶಗಳಲ್ಲಿ ಉದ್ಯೋಗದಲ್ಲಿದ್ದಾರೆ. ದೊಡ್ಡ ಉದ್ಯಮಿಗಳಾಗಿದ್ದಾರೆ.

ಅಷ್ಟೇ ಏಕೆ ಮಹಾರಾಷ್ಟ್ರ ರಾಜ್ಯದ ಗೃಹ ಸಚಿವರಾಗಿದ್ದ ಗಜಾನನ ಕೀರ್ತಿಕರ್‌ ಕಾರವಾರ ಮಾರುತಿ ಗಲ್ಲಿ ಮೂಲದವರು. ಅವರೂ ಪ್ರತಿ ವರ್ಷ ಜಾತ್ರಗೆ  Maruti Jatra ಬಂದು ಪ್ರಸಾದ ಪಡೆಯುತ್ತಾರೆ.

ಯುಎಸ್‌ಎ, ಆಸ್ಟ್ರೇಲಿಯಾ, ದುಬೈ ಹೀಗೆ ವಿವಿಧ ದೇಶಗಳಿಂದ ಜಾತ್ರೆಗಾಗಿಯೇ ಸಾಕಷ್ಟು ಜನ ಆಗಮಿಸುತ್ತಾರೆ ಎಂಬುದು ದೇವಸ್ಥಾನ ಆಡಳಿತ ಮಂಡಳಿಯ ರಾಜನ್‌ ಮಾಪ್ಸೇಕರ್‌ ಅವರ ಅಭಿಪ್ರಾಯ.

Maruti Jatra

ಕಳೆದ ವರ್‌ ಪ್ರಸಾದದ ಬಟ್ಟಲು 2.25 ಲಕ್ಷ ರೂ.ಗೆ ಹರಾಜಾಗಿತ್ತು. ಅದಕ್ಕೂ ಹಿಂದಿನ ವರ್ಷ 2  ಲಕ್ಷ ರೂ.ಗೆ ಹರಾಜಾಗಿತ್ತು. ಇದು ದಾಖಲೆಯ ಬೆಲೆಯಾಗಿದೆ ಎಂಬುದು ದೇವಸ್ಥಾನದ ಆಡಳಿತ ಮಂಡಳಿಯ ಅಭಿಪ್ರಾಯ.