ಬೋರಗಾಂವ: ಪಟ್ಟಣದ ಭಾಟನಾಂಗನುರ ಗ್ರಾಮದ ಯೋಧ ದೀಪಕ ಪಾಟೀಲ ಪುಣೆಯ ನವರೋಜಿಯ ಭಾರತೀಯ ಸೇನಾ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಿಸದೆ ಈಚೆಗೆ ನಿಧನರಾದ ಹಿನ್ನೆಲೆ ಸೋಮವಾರ ಯುವ ನಾಯಕ ಉತ್ತಮ ಪಾಟೀಲ,
ಅರಿಹಂತ ಉದ್ಯೋಗ ಸಮೂಹ ಅಧ್ಯಕ್ಷ ಅಭಿನಂದನ ಪಾಟೀಲ ಅವರ ಕುಟುಂಬ ಭೇಟಿ ನೀಡಿ ಮಾಡಿ ಸಾಂತ್ವನ ಹೇಳಿದರು.
ಅರಿಹಂತ ಉದ್ಯೋಗ ಸಮೂಹದಿಂದ ಹುತಾತ್ಮ ಯೋಧ ದೀಪಕ ಪಾಟೀಲ ಕುಟುಂಬಕ್ಕೆ 50,000 ರೂ. ನೆರವು ನೀಡಿದರು.
ಶಿವಾಜಿ ಚೌಗುಲೆ, ಧೋಂಡಿರಾಮ ಚೌಗುಲೆ, ಕೆ.ಡಿ.ಪಾಟೀಲ, ಬಂಡಾ ಪಾಟೀಲ, ರಾಜೇಂದ್ರ ಕೋಷ್ಠಿ, ವಿಶ್ವನಾಥ ಪಾಟೀಲ, ರಾಜಾರಾಂ ಪಾಟೀಲ, ಬಿ.ಎಸ್.ಪಾಟೀಲ, ಯುವರಾಜ ಪಾಟೀಲ, ಪಿ.ಎಸ್. ಪಾಟೀಲ, ನಿತಿನ ಪಾಟೀಲ, ಶೇಖರ ಪಾಟೀಲ, ಸುನೀಲ ಪಾಟೀಲ, ರಂಗರಾವ ಪಾಟೀಲ, ಪ್ರಕಾಶ ಪಾಟೀಲ, ಆರ್.ಆರ್.ಪಾಟೀಲ, ರಂಜಿತ ಪಾಟೀಲ, ಆನಂದ ಪಾಟೀಲ, ಸಿದ್ರಾಮ ಪಾಟೀಲ, ಚಂದ್ರಕಾಂತ ಪಾಟೀಲ, ವಿಠ್ಠಲ ಪಾಟೀಲ, ಕೇತನ ಪಾಟೀಲ ಇತರರಿದ್ದರು.