ಜಿಲ್ಲೆ

ಎರ್ಮಾಳಿನ ವಿವಾಹಿತೆ ನಾಪತ್ತೆ

ಇಂದಿರಾ ಎನ್ ಕೆ

ಪಡುಬಿದ್ರಿ: ವಿವಾಹಿತ ಮಹಿಳೆ ಆಯಿಷಾ (33) ಎಂಬುವರು ಎರ್ಮಾಳಿನ ಮನೆಯಿಂದ ನ.26ರಿಂದ ನಾಪತ್ತೆಯಾಗಿರುವ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತಿ ಹಾಗೂ ಮಗನೊಂದಿಗೆ ದುಬೈನಲ್ಲಿ ವಾಸವಾಗಿದ್ದ ಆಯಿಷಾ 5 ತಿಂಗಳ ಹಿಂದೆ ಪತಿ ಹಾಗೂ ಮಗನೊಂದಿಗೆ ಊರಿಗೆ ಬಂದು ನೆಲೆಸಿದ್ದರು. ನ.26ರಂದು ಅವರ ಪತಿ ಅಬ್ದುಲ್ ಅಜೀಜ್ ತಾಯಿಯನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ದು ವಾಪಸ್ ಮನೆಗೆ ಬಂದಾಗ ಆಯಿಷಾ ನಾಪತ್ತೆಯಾಗಿದ್ದರು. ಎಲ್ಲ ಕಡೆ ಹುಡುಕಾಡಿ, ಸಂಬಂಧಿಕರಲ್ಲಿ ವಿಚಾರಿಸಿದರೂ ಅವರ ಸುಳಿವು ಲಭ್ಯವಾಗಿಲ್ಲ ಎಂದು ಅಜೀಜ್ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.