ಜಿಲ್ಲೆ

1,99,999 ರೂ.ಗೆ ಮದುವೆ ಪ್ಯಾಕೇಜ್

Dakshina Kannada

ಮಂಗಳೂರು: ‘ನೀವು 1,99,999 ರೂ. ಪಾವತಿಸಿದರೆ ಸಾಕು. ಇತರ ಹೆಚ್ಚುವರಿ ಖರ್ಚುಗಳಿಲ್ಲದೆ ಒಂದು ಮದುವೆ ಸಮಾರಂಭ ನಡೆಸಿಕೊಡಲಾಗುವುದು!’

ಇದು ಕರಾವಳಿಯ ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯೊಂದು ಸಾರ್ವಜನಿಕರಿಗೆ ನೀಡಿರುವ ಆಫರ್.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಭೆ-ಸಮಾರಂಭಗಳಿಗೆ ಸೇರುವ ಜನರ ಸಂಖ್ಯೆಯನ್ನು ಸರ್ಕಾರ ಮಿತಿಗೊಳಿಸಿದ್ದರಿಂದ ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಗಳೂ ತಮ್ಮ ಕಾರ್ಯತಂತ್ರ ಬದಲಿಸಿಕೊಂಡಿವೆ ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ. ಸರ್ಕಾರದ ನೀತಿಯಂತೆ 50 ಜನರು ಸೇರುವ ಮದುವೆ ಲಕ್ಷೃದಲ್ಲಿಟ್ಟುಕೊಂಡು ಸಂಸ್ಥೆ ಈ ಪ್ಯಾಕೇಜ್ ಪ್ರಕಟಿಸಿದೆ.

ಏನೇನು ಸೌಲಭ್ಯ: ಮದುವೆ ಆಮಂತ್ರಣ ಪತ್ರಿಕೆ, ವಧು/ವರ ಅಲಂಕಾರ, ಮೆಹೆಂದಿ ಅಲಂಕಾರ, ಫೋಟೋಗ್ರಫಿ, ವಿಡಿಯೋಗ್ರಫಿ, ಮದುವೆ ಮಂಟಪ, ಸ್ವಾಗತದ್ವಾರದ ಅಲಂಕಾರ, 50 ಜನರಿಗೆ ಸಸ್ಯಾಹಾರಿ ಊಟ, ಧ್ವನಿವರ್ಧಕ, ವಿಡಿಯೋ, ಫೊಟೋ ಅಲ್ಬಂ, ಥರ್ಮಲ್ ಸ್ಕಾೃನಿಂಗ್ ವ್ಯವಸ್ಥೆ, ಹ್ಯಾಂಡ್ ಸ್ಯಾನಿಟೈಸರ್, 50 ಮಂದಿಗೆ ಎನ್ 95 ಮಾಸ್ಕ್ ಸೌಲಭ್ಯಗಳನ್ನು ಈ ಮದುವೆ ಪ್ಯಾಕೇಜ್ ಒಳಗೊಂಡಿದೆ.