ರಾಯಚೂರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಜಯಂತಿಯ ನಿಮಿತ್ತ ನಗರದ ಡಾ.ಬಿ.ಅರ್.ಅಂಬೇಡ್ಕರ್ ವೃತ್ತದಲ್ಲಿ ಸಮುಖದಲ್ಲಿ ಅಯ್ಯಣ್ಣ ಮತ್ತು ಶಾಂಭವಿ ಹಾರ ಬದಲಾಯಿಸಿಕೊಳ್ಳುವ ಮೂಲಕವ ದಾಂಪತ್ಯಕ್ಕೆ ಕಾಲಿಟ್ಟರು.
ಬಂತೇಜಿಯವರು ಭೌದ್ದ ದರ್ಮಾಚರಣೆ ಪ್ರಕಾರ ಮದುವೆಗೆ ಶುಭ ಕೋರಿದರು.
ಮದುಮಗ ಅಯ್ಯಣ್ಣ ಮಾತನಾಡಿ ಶೋಷಿತ ಸಮೂದಯಗಳಿಗೆ ಧ್ವನಿ ನೀಡದ ಡಾ.ಅಂಬೇಡ್ಜರ ದಲಿತ ಸೂರ್ಯನಾಗಿ ಉದಯಿಸಿದ ಪವಿತ್ರ ದಿನದಂದು ಮದುವೆಯಾಗಲು ನಿರ್ಧರಿಸಿರುವದಾಗಿ ಹೇಳಿದರು. ಈ ಸಂದರ್ಭದಲ್ಲಿ ರವೀಂದ್ರನಾಥ ಪಟ್ಟಿ, ಕೆ.ಇ.ಕುಮಾರ,ಭಾಸ್ಜರ ಪ್ರಸಾದ,ವಿಶ್ವನಾಥಪಟ್ಟಿ,ರಾಮು ಸೇರಿ ಅನೇಕರು ಇದ್ದರು.