ಜಿಲ್ಲೆ

ಕಚೇರಿಯನ್ನೇ ಮನೆ ಮಾಡಿಕೊಂಡ್ರಾ ಮೇಯರ್​? ಮಹಾನಗರ ಪಾಲಿಕೆ ಕಚೇರಿಯಲ್ಲೇ ವೆಡ್ಡಿಂಗ್ ಆ್ಯನಿವರ್ಸರಿ!

ಬಳ್ಳಾರಿ: ಮಹಾನಗರ ಪಾಲಿಕೆ ಕಚೇರಿಯಲ್ಲೇ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ಮೂಲಕ ಇಲ್ಲಿನ ಮೇಯರ್​​ ಸರ್ಕಾರಿ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬಳ್ಳಾರಿ ಪಾಲಿಕೆ ಮೇಯರ್ ರಾಜೇಶ್ವರಿ ಸುಬ್ಬರಾಯಡು ಅವರ ಮದುವೆ ವಾರ್ಷಿಕೋತ್ಸವವನ್ನು ಪಾಲಿಕೆ ಕಚೇರಿಯಲ್ಲೇ ಕೇಕ್​ ಕತ್ತರಿಸಿ ಆಚರಿಸಿಕೊಂಡಿದ್ದಲ್ಲದೇ, ಫೋಟೋಗಳಿಗೂ ಪೋಸ್​ ನೀಡಿದ್ದಾರೆ.

ಮಹಾನಗರ ಪಾಲಿಕೆ ಮೇಯರ್ ಅವರಿಂದಲೇ  ಸರ್ಕಾರಿ ಕಚೇರಿ ದುರ್ಬಳಕೆಯಾಗಿದ್ದು, ಮೇಯರ್ ರಾಜೇಶ್ವರಿ ಹಾಗೂ ಪತಿ ಸುಬ್ಬಾರಾಯಡು ಅವರ ವಾರ್ಷಿಕೋತ್ಸವ ಆಚರಣೆಯಲ್ಲಿ ಸ್ಥಳೀಯ ಕಾಂಗ್ರೆಸ್​ ನಾಯಕರೂ ಪಾಲ್ಗೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)