ಜಿಲ್ಲೆ

ಮದುವೆಗೆ ಹೆಣ್ಣು ಸಿಗಲಿಲ್ಲ ಎಂದು ಮನ ನೊಂದು ಯುವಕ ಆತ್ಮಹತ್ಯೆ

Uttara Kannada - Subash Hegde

ಕಾರವಾರ: ಮದುವೆಯಾಗಲು ಹೆಣ್ಣು ಸಿಕ್ಕಿಲ್ಲ ಎಂದು ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೊಯಿಡಾ ತಾಲೂಕಿನ ರಾಮನಗರ ಸಮೀಪ ನಡೆದಿದೆ.
ತಾಲೂಕಿನ ಚಾಂದೇವಾಡಿಯ ಬಾಲಚಂದ್ರ ಗಜಾನನ ಚೌಧರಿ(37) ಮೃತರು. ಪೇಟಿಂಗ್ ಕೆಲಸ ಮಾಡಿಕೊಂಡಿದ್ದ ಅವರು ಮದುವೆಯಾಗುವ ಸಲುವಾಗಿ ಕಳೆದ ನಾಲ್ಕೈದು ವರ್ಷಗಳಿಂದ ಹೆಣ್ಣು ಹುಡುಕುತ್ತಿದ್ದರು. ಹೆಣ್ಣಿನ ಕಡೆಯವರು ಏನಾದೂ ಕಾರಣ ಕೊಟ್ಟು ಮದುವೆಗೆ ನಿರಾಕರಿಸುತ್ತಿದ್ದರು. ಇದರಿಂದ ಗಜಾನನ ಬೇಸರಗೊಂಡಿದ್ದರು.
ರಾಮನಗರಕ್ಕೆ ಹೋಗಿ ಬರುವುದಾಗಿ ಹೇಳಿ ಮಂಗಳವಾರ ಹೋದ ಗಜಾನನ ಚೌಧರಿ ಮನೆಯಿಂದ ನಾಪತ್ತೆಯಾಗಿದ್ದರು. ನಂತರ ಅವರು ಲೋಂಡಾ ಸಮೀಪ ಫಾರೆಸ್ಟ್ ನರ್ಸರಿಯಲ್ಲಿ ಗಿಡಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ಸಾವಿಗೆ ಹೆಣ್ಣು ಸಿಗದಿರುವುದೇ ಕಾರಣ ಎಂದು ಮೃತರ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.