ಜಿಲ್ಲೆ

ಮಲಗಿದ್ದವನ ಮೇಲೆ ಹರಿದ ಕಾರು; ಚಿರನಿದ್ರೆಗೆ ಜಾರಿದ ವ್ಯಕ್ತಿ

Haveri - Kariyappa Aralikatti

ರಾಣೆಬೆನ್ನೂರ: ಬೆಳ್ಳುಳ್ಳಿ ಮಾರುಕಟ್ಟೆಯಲ್ಲಿ ಮಲಗಿಕೊಂಡಿದ್ದ ವ್ಯಕ್ತಿಯ ಮೇಲೆ ಕಾರು ಹರಿದು ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
ನಗರದ ಕೆ.ಜಿ. ಕಾಲನಿ ನಿವಾಸಿ ಗೌಸಪೀರ್ ನಜೀರಸಾಬ ಟಿಂಕೂರ (45) ಮೃತ ವ್ಯಕ್ತಿ.
ಈತ ಮಾರುಕಟ್ಟೆ ಆವರಣದಲ್ಲಿ ಮಲಗಿಕೊಂಡ ಸಮಯದಲ್ಲಿ ಕಾರೊಂದು ಹಿಂಬದಿಯಿಂದ ಬಂದು ಹರಿದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಗೌಸಪೀರ್‌ನನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.