ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆ ಡಾ. ರಾಮಮನೋಹರ ಲೋಹಿಯಾನಗರದಲ್ಲಿ ಮಹಾನಗರ ಪಾಲಿಕೆ ವತಿಯಿಂದ ನಿಮಿರ್ಸಲಾಗಿರುವ ನೂತನ ತರಕಾರಿ ಮಾರುಕಟ್ಟೆಯನ್ನು ಉಪಮೇಯರ್ ಸತೀಶ ಹಾನಗಲ್ಲ ಉದ್ಘಾಟಿಸಿದರು.
ಇಲ್ಲಿ ಶಾಶ್ವತ ತರಕಾರಿ ಮಾರುಕಟ್ಟೆ ನಿಮಿರ್ಸಲಾಗಿದ್ದು, ಈ ಭಾಗದ ಜನರ ಬಹುದಿನದ ಕನಸು ನನಸಾಗಿದೆ. ಸಂಕ್ರಾಂತಿ ದಿನದಂದು ಇದರ ಉದ್ಘಾಟನೆ ನೆರವೇರಿಸುವ ಮೂಲಕ ಹಬ್ಬದ ಸಂಭ್ರಮ ಇಮ್ಮಡಿಗೊಂಡಿತು ಎಂದು ಸ್ಥಳಿಯ ನಾಗರಿಕರು, ವ್ಯಾಪಾರಸ್ಥರು ಹೇಳಿದರು.
ನಗರ ಸುಧಾರಣೆ ಸಮಿತಿ ಪದಾಧಿಕಾರಿಗಳಾದ ಕಿರಣಸಿಂಗ್ ರಜಪೂತ, ರಾಜು ಹಿರೇವಡೆಯರ, ಟಿ.ಕೆ. ಬರಗಿ, ಎಸ್.ಎಂ. ಬಡಿಗೇರ, ನಾಗರಾಜ ನಾಡಕಣಿರ್, ಕಲ್ಲಪ್ಪ ಅಂಗಡಿ, ಆನಂದ ಬಳ್ಳಾರಿ, ಮಂಜುನಾಥ ಉಳ್ಳಾಗಡ್ಡಿ, ಎಂ.ಜಿ. ಬೇವಿನಕಟ್ಟಿ, ಅಶೋಕ ಹಾವೇರಿ, ಸಕ್ರಪ್ಪ ಮ್ಯಾಗೇರಿ, ವಿಜಯ ಹೆಬ್ಬಳ್ಳಿ, ಸಂತೋಷ ಡೊಳ್ಳಿನ, ಈರಣ್ಣ ಹುನಗುಂಡಿ, ಇತರರು ಪಾಲ್ಗೊಂಡಿದ್ದರು.