ವಿಜಯವಾಣಿ ಸುದ್ದಿಜಾಲ ಕಲಬುರಗಿ
ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಗರದ ಖರೀದಿ ಭರಾಟೆ ಜೋರಾಗಿದ್ದು, ಮಾರುಕಟ್ಟೆ ಫುಲ್ ರಶ್ ಆಗಿದೆ. ಗಣೇಶನ ಹಬ್ಬಕ್ಕೆ ಬೆಲೆ ಬಿಸಿ ತಟ್ಟಿದೆ.
ಗಣೇಶ ಮೂರ್ತಿ, ಹೂವು-ಹಣ್ಣು, ಬಾಳೆ ದಿಂಡು, ತೆಂಗಿನ ಗರಿ, ಅಲಂಕಾರ ಮಾಡುವ ಸಾಮಗ್ರಿಗಳು ಹೀಗೆ ಎಲ್ಲವನ್ನು ಖರೀದಿಸಲು ಕಾರ್ಯ ಮಾರ್ಕೇಟ್ ನಲ್ಲಿ ಜೋರಾಗಿ ನಡೆದಿರುವುದು ಸೋಮವಾರ ಕಂಡು ಬಂದಿತು.
ನಗರದ ಸೂಪರ್ ಮಾರ್ಕೇಟ್ , ಅಪ್ಪನ ಗುಡಿ, ರಾಮ ಮಂದಿರ, ಎಂಎಸ್ ಕೆ ಮಿಲ್ ಕಣ್ಣಿ ಮಾರ್ಕೇಟ್, ಶಹಾಬಜಾರ ನಾಕಾ, ನೆಹರು ಗಂಜ್, ಜಯ ನಗರ, ಖರ್ಗೆ ಸರ್ಕಲ್, ಎಂ.ಬಿ.ನಗರ ಮೊದಲಾದ ಕಡೆಗಳಲ್ಲಿ ಗಣೇಶ ಹಬ್ಬದ ಖರೀದಿ ಭರಾಟೆ ಮಾರುಕಟ್ಟೆ ಫುಲ್ ರಶ್ ಆಗಿವೆ. ಉಳಿದಂತೆ ಜಿಲ್ಲೆಯ ಪ್ರಮುಖ ಪಟ್ಟಣಗಳು, ತಾಲೂಕುಗಳಲ್ಲಿ ಹಬ್ಬದ ಸಂಭ್ರಮ ಇಮ್ಮಡಿಸಿದೆ.